ದೇವನಹಳ್ಳಿ: ನಗರದ ಹಳೇ ಬಸ್ ನಿಲ್ದಾಣ ದಿಂದ ಪ್ರಮುಖ ಬೀದಿಗಳಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ಜೋಳಿಗೆ ಕಾರ್ಯಕ್ರಮದಲ್ಲಿ ಅಂಗಡಿ ಗಳಿಗೆ ತೆರಳಿ ಕನ್ನಡ ಪುಸ್ತಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ಜೋಳಿಗೆ ಹಾಕಿಕೊಂಡು ದಾರಿಯಲ್ಲಿ ಸಾಗಿ ಮಾರಾಟ ಮಾಡಿದ ದೃಷ್ಯ ಕಂಡು ಬಂತು. ಪುಸ್ತಕ ಜೋಳಿಗೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ಮಾತನಾಡಿ ಕನ್ನಡ ಪುಸ್ತಕಗಳನ್ನು ಕೊಳ್ಳುವಿಕೆ ಹಾಗೂ ಅದನ್ನು ಓದುವುದು ಇತ್ತೀಚಿಕೆ ಕಡಿಮೆ ಆಗಿದೆ.
ಕನ್ನಡದ ಸಾಹಿತಿಗಳು ಕನ್ನಡ ಪರಂಪರೆಯ ಬಗ್ಗೆ ಬರೆದಿರುವ ಪುಸ್ತಕಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ನಾವು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದೇವೆ. ನಾಡಿನ ಸಂಸ್ಕೃತಿ ನಮ್ಮ ಭಾಷೆ ಯ ಪಸರಿನ ಬಗ್ಗೆ ಹೊರ ರಾಜ್ಯಗಳ ವಾಸಿಗಳಿಗೂ ಪುಸ್ತಕಗಳ ಮೂಲಕ ಪರಿಚಯಿಸಬೇಕು. ಕೇವಲ ಪುಸ್ತಕಗಳ ಕೊಂಡು ಮನೆಯಲ್ಲಿ ಇಟ್ಟಿಕೊಂಡರೆ ಸಾಲದು ಅವುಗಳನ್ನು ಓದಿ ಹೆಚ್ಚಿನ ಜ್ಞಾನಾರ್ಜನೆಯನ್ನು ಬೆಳೆಸಿಕೋಳ್ಳಬೇಕು ಎಂದರು.
ಶಾಸಕ ಎಲ್ ಎನ್ ನಾರಾಯಣಸ್ವಾಮಿ ಮಾತನಾಡಿ ಮಹನೀಯರು ¸ರೆದಿರುವ ಪುಸ್ತಕಗಳನ್ನು ಓದುವುದರ ಮೂಲಕ ಹೆಚ್ಚಿನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಆಗುವುದು. ನಮ್ಮ ಸಾಹಿತ್ಯ ಲೋಕಕ್ಕೆ ಹೆಚ್ಚಿನ ಪುಸ್ತಕಗಳನ್ನು ಕೊಡುಗೆಯಾಗಿ ಸಾಹಿತಿಗಳು ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಪಂ ಅಧ್ಯಕ್ಷೆ ಜಯಮ್ಮ, ಸದಸ್ಯ ಕೆ.ಸಿ ಮಂಜುನಾಥ್, ತಾಪಂ ಅಧ್ಯಕ್ಷೆ ಚೆ„ತ್ರಾ, ಸದಸ್ಯರಾದ ಭಾರತಿ, ಮಹೇಶ್, ಮಂಜುನಾಥ್, ಎಪಿಎಮ್‌ಸಿ ಅಧ್ಯಕ್ಷ ಕೆ.ವಿ ಮಂಜುನಾಥ್, ಉಪಾಧ್ಯಕ್ಷ ಸುಧಾಕರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣ ನವರ್ , ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಎಮ್ ನಾಗರಾಜ್, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ. ನಾಯಕ್,
ತಹಶೀಲ್ದಾರ್ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ರಾಜಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಕೆ ಶಿವಪ್ಪ , ಕೃಷಿಕ ಸಮಾಜದ ನಿರ್ದೇಶಕ ಎಚ್ ಎಮ್ ರವಿಕುಮಾರ್, ವಿಎಸ್‌ಎಸ್‌ಎನ್ ನಿರ್ದೇಶಕ ಸುನೀಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಮುಖಂಡ ಹೆ„ ಕೋಟ್ ವಕೀಲ ನಾರಾಯಣಸ್ವಾಮಿ, ನಾಗರಾಜ್, ಎಸ್ ರಮೇಶ್, ನಾಗರಾಜ್ ಗೌಡ, ಪುರಸಭಾ ಸದಸ್ಯರು ಇದ್ದರು.