Advertisement

ವಾಟ್ಸ್‌ಆ್ಯಪ್‌ ಮಲ್ಟಿಡಿವೈಸ್‌ ಫೀಚರ್‌ ಶೀಘ್ರ ಲಭ್ಯ

05:38 PM Mar 23, 2022 | Team Udayavani |

ನವದೆಹಲಿ: ಒಂದೇ ಖಾತೆಯನ್ನು ನಾಲ್ಕು ಬೇರೆ ಬೇರೆ ಡಿವೈಸ್‌ಗಳಲ್ಲಿ ಬಳಸುವುದಕ್ಕೆ ಅವಕಾಶ ಮಾಡುವ “ಮಲ್ಟಿಡಿವೈಸ್‌ ಫೀಚರ್‌’ ತರುವುದಾಗಿ ವಾಟ್ಸ್‌ಆ್ಯಪ್‌ ಸಂಸ್ಥೆಯು ಈ ಹಿಂದೆಯೇ ಹೇಳಿತ್ತು.

Advertisement

ಬೀಟಾ ವರ್ಷನ್‌ ಬಳಕೆದಾರರಿಗೆ ಪರಿಚಯಿಸಲಾಗಿದ್ದ ಈ ಫೀಚರ್‌ ಇನ್ನು ಕೆಲ ದಿನಗಳಲ್ಲೇ ಎಲ್ಲ ಬಳಕೆದಾರರಿಗೂ ಲಭ್ಯವಾಗಲಿದೆ.

ಇದರಿಂದಾಗಿ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇಲ್ಲದಿದ್ದರೂ, ವೆಬ್‌ ಮೂಲಕ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲೇ ವಾಟ್ಸ್‌ಆ್ಯಪ್‌ ಬಳಸಬಹುದು.

ಒಂದೇ ಸಮಯದಲ್ಲಿ ನಾಲ್ಕು ಕಂಪ್ಯೂಟರ್‌/ಲ್ಯಾಪ್‌ಟಾಪ್‌/ಟ್ಯಾಬ್‌ ಅಥವಾ ಫೋನ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್‌ ಖಾತೆ ಬಳಸಬಹುದು. ಅದಷ್ಟೇ ಅಲ್ಲದೆ, ವಾಟ್ಸ್‌ಆ್ಯಪ್‌ ಸಂಸ್ಥೆಯು ಸಂದೇಶಗಳಿಗೆ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡುವ ಅಪ್‌ಡೇಟ್‌ ಬಗ್ಗೆಯೂ ಕೆಲಸ ಮಾಡುತ್ತಿದೆ.

ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮತ್ತೆ 304 ಅಂಕ ಕುಸಿತ;ಮಾ.23ರಂದು ಲಾಭಗಳಿಸಿದ ಷೇರು ಯಾವುದು?

Advertisement

ಅದರಿಂದಾಗಿ ನೀವು ನಿಮಗೆ ವಾಟ್ಸ್‌ಆ್ಯಪ್‌ನಲ್ಲಿ ಬಂದಿರುವ ಸಂದೇಶಕ್ಕೆ, ಯಾವುದಾದರೂ ಇಮೋಜಿಯನ್ನು ಪ್ರತಿಕ್ರಿಯೆ ನೀಡಬಹುದು. ಈ ಸೌಲಭ್ಯವು ಈಗಾಗಲೇ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next