Advertisement
ದೇಶದ ಮೊದಲ ಒಮಿಕ್ರಾನ್ ಸೋಂಕಿತರಲ್ಲಿ ಓರ್ವರಾದ ಬೆಂಗಳೂರಿನ ವೈದ್ಯರನ್ನು ಬುಧವಾರ (ಡಿ.15) ಬಿಡುಗಡೆ ಮಾಡಲಾಗಿದೆ.
ಈಗ ಇಬ್ಬರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇಬ್ಬರು ಮುಂದಿನ 6 ದಿನಗಳ ಅನಂತರ ಮತ್ತೊಮ್ಮೆ ಸ್ಲ್ಯಾಬ್ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿ, ಕೊರೊನಾ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ಹೋಮ್ ಕ್ವಾರಂಟೈನ್‌ನಿಂದ ಬಿಡುಗಡೆ ಸಿಗಲಿದೆ.
Related Articles
Advertisement
ಡಿ. 2ರಂದು ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಆ ಪೈಕಿ ಬೆಂಗಳೂರಿನ ವೈದ್ಯರು ಒಬ್ಬರು. ಯಾವುದೇ ವಿದೇಶಿ ಪ್ರಯಾಣ ಮಾಡಿರದ ಈ ವೈದ್ಯ ನಗರದಲ್ಲಿ ನ. 18ರಂದು ನಡೆದ ವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇದಾದ ನಂತರ ನ. 22ರಂದು ಅವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಪರೀಕ್ಷೆ ಸಮಯ ಸಿಟಿ ವ್ಯಾಲ್ಯು ಕಡಿಮೆ ಇದ್ದುದರಿಂದ ಜಿನೋಮಿಕ್ ಸಿಕ್ವೆನ್ಸಿಂಗ್ ಕಳುಹಿಸಲಾಗಿತ್ತು. ಈ ವೇಳೆ ರೂಪಾಂತರಿ ತಳಿ ದೃಢಪಟ್ಟಿತ್ತು. ಡಿ.7ರಂದು ವ್ಯಕ್ತಿ ಸೋಂಕಿನಿಂದ ಚೇತರಿಸಿಕೊಂಡರು ಅನ್ನುವಷ್ಟರಲ್ಲಿ ಮತ್ತೆ ಪಾಸಿಟಿವ್ ಬಂದಿತ್ತು. ಡಿ.14ರಂದು ಮತ್ತೆ ವ್ಯಕ್ತಿಯ ಸ್ಲ್ಯಾಬ್ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ವ್ಯಕ್ತಿಗೆ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ.ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಹ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಡಿ.1ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ 34ವರ್ಷದ ವ್ಯಕ್ತಿಯಲ್ಲಿ ಡಿ.3ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಡಿ.12ರಂದು ಬಂದ ಜಿನೋಮಿಕ್ ಸಿಕ್ವೆನ್ಸಿಂಗ್ ವರದಿ ನೆಗೆಟಿವ್ ಬಂದಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಶನ್‌ಗೊಳಿಸಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.