ರಾಜ್‌ಕೋಟ್: ಗುಜರಾತ್ ರಾಜಕಾರಣದಲ್ಲಿ ಹಿಂದಿನಿಂದಲೂ ದೇಗುಲಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಕೂಡ ದೇಗುಲ ರಾಜಕೀಯಕ್ಕೆ ಇಳಿದಿದ್ದು, ಮೊದಲ ಹಂತದ ಮತದಾನ ಸಮೀಪಿಸುತ್ತಿದ್ದಂತೆಯೇ ದೇಗುಲಗಳೇ ರಾಜಕೀಯದ ಕೇಂದ್ರಬಿಂದುವಾಗಿ ಪರಿಣಮಿಸಿದೆ.
ಪಾಟಿದಾರ ಸಮುದಾಯಕ್ಕೆ ಅತ್ಯಂತ ಪ್ರಮುಖವಾಗಿರುವ ರಾಜ್‌ಕೋಟ್‌ನ ಖೋಡಲ್‌ಧಾಮ್ ದೇಗುಲ ಮತ್ತು ಉತ್ತರ ಗುಜರಾತ್‌ನ ಮೆಹಸಾನಾದಲ್ಲಿನ ಉಮಿಯಾಧಾಮ್ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಗಮನಸೆಳೆದಿವೆ. ಯಾಕೆಂದರೆ ಈ ಎರಡೂ ದೇಗುಲಗಳ ಟ್ರಸ್ಟಿಗಳು ಈಗ ಚುನಾವಣೆಗೆ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಈ ದೇಗುಲಗಳನ್ನು ನಿರ್ಮಿಸಲಾಗಿದೆ. ಖೋಡಲ್‌ಧಾಮದ ಇಬ್ಬರು ಟ್ರಸ್ಟಿಗಳಾದ ದಿನೇಶ್ ಚೊವಾತಿಯಾ ಮತ್ತು ರವಿಭಾಯ್ ಅಂಬಲಿಯಾ ಕಾಂಗ್ರೆಸ್‌ನಿಂದ ರಾಜ್‌ಕೋಟ್ ದಕ್ಷಿಣ ಮತ್ತು ಜೇಟ್‌ಪುರದಲ್ಲಿ ಸ್ಪರ್ಧಿಸಿ ದ್ದಾರೆ. ಇನ್ನೊಂದೆಡೆ ಅಮ್ರೇಲಿಯಲ್ಲಿ ಬಿಜೆಪಿಯಿಂದ ಗೋಪಾಲ್‌ಭಾಯ್ ವಸ್ತಾಪರ ಸ್ಪರ್ಧಿಸಿದ್ದಾರೆ.
ದೇಗುಲ ರಾಜಕೀಯಕ್ಕೂ ಗುಜರಾತಿಗೂ ನಂಟು: 1990 ರಿಂದಲೂ ಗುಜರಾತ್ ರಾಜಕೀಯಕ್ಕೂ ದೇಗು ಲಕ್ಕೂ ಅವಿನಾಭಾವ ಸಂಬಂಧವಿದೆ. 1990ರಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ ರಾಮ ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಆರಂಭಿಸಿದ್ದು ಸೋಮ ನಾಥ ದೇಗುಲದಿಂದ. ನಂತರ 2002ರಲ್ಲಿ ನಡೆದ ದಂಗೆಗೂ ಅಯೋಧ್ಯೆಗೂ ನೇರ ಸಂಬಂಧವಿದೆ. ಇನ್ನು ಈ ಬಾರಿಯಂತೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಲ್ಲ ಸಮುದಾಯದವರೂ ಆರಾಧಿಸುವ ದೇಗುಲಗಳಿಗೆ ಭೇಟಿ ನೀಡುವ ಮೂಲಕ ಮತ್ತೆ ಈ ರಾಜಕೀಯವನ್ನು ಚಾಲ್ತಿಗೆ ತಂದಿದ್ದಾರೆ.
ಇದೇ ಮೊದಲ ಬಾರಿಗೆ ನೋಟಾ ಪರಿಚಯ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ನೋಟಾವನ್ನು ಪರಿಚಯಿಸಲಾ ಗುತ್ತಿದೆ. ಜಿಎಸ್‌ಟಿ ಜಾರಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಮಾಧಾನ ಹೊಂದಿರುವ ಕೆಲವು ಜಾತಿಗಳ ಜನರು ಈ ಬಾರಿ ನೋಟಾ ಮೊರೆ ಹೋಗುವ ಸಾಧ್ಯತೆ ಯಿದೆ ಎನ್ನಲಾಗಿದೆ. ಆದರೆ ನೋಟಾದಿಂದ ಪಕ್ಷದ ಮತ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಯಾಗದು ಎಂದು ಬಿಜೆಪಿ ಹೇಳಿಕೊಂಡಿದೆ. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನೋಟಾ ಪರಿಚಯಿಸ ಲಾಗಿತ್ತು. ಆಗ ಒಟ್ಟು 4.20 ಲಕ್ಷ ಮತಗಳು ನೋಟಾಗೆ ಬಿದ್ದಿದ್ದವು.
ಕಾಂಗ್ರೆಸ್ ಬಗ್ಗೆಯೇ ಮಾತನಾಡ್ತಾರೆ ಮೋದಿ!: ಗುಜರಾತ್‌ಗೆ ಯಾವುದೇ ಭವಿಷ್ಯವೇ ಇಲ್ಲವೆನ್ನುವಂತೆ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇವಲ ಕಾಂಗ್ರೆಸ್ ಬಗ್ಗೆಯೇ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಅಂದರೆ ಜಿಎಸ್‌ಟಿ ಮತ್ತು ನೋಟು ಅಮಾನ್ಯದಂತಹ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಅವರು ಅಂಜಾರ್‌ನಲ್ಲಿ ನಡೆಸಿದ ರ್ಯಾಲಿಯಲ್ಲಿ ಹೇಳಿದ್ದಾರೆ.
ಜಾತಿ ಲೆಕ್ಕಾಚಾರಕ್ಕೆ ಜೈ
ಈ ಬಾರಿಯೂ ಜಾತಿ ಲೆಕ್ಕಾಚಾರವನ್ನಿಟ್ಟುಕೊಂಡೇ ಅಭ್ಯರ್ಥಿಗಳಿಗೆ ಎಲ್ಲ ಪಕ್ಷಗಳೂ ಟಿಕೆಟ್ ನೀಡಿವೆ. ಪಾಟೀದಾರರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ಸಿಕ್ಕಿದೆ. ಬಿಜೆಪಿಯಲ್ಲಿ 50 ಪಾಟೀದಾರರಿಗೆ ಟಿಕೆಟ್ ನೀಡಲಾಗಿದ್ದರೆ, ಕಾಂಗ್ರೆಸ್ 41 ಪಾಟೀದಾರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನೊಂದೆಡೆ ಬಿಜೆಪಿಯಿಂದ 58 ಹಾಗೂ ಕಾಂಗ್ರೆಸ್‌ನಿಂದ 62 ಒಬಿಸಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಬಾರಿಯ ಚುನಾವಣೆಯ ಗೆಲುವು ಇರುವುದೇ ಹೆಚ್ಚುವರಿ ಶೇ.4 ರಿಂದ 5 ಮತದ ಪಾಲು ಯಾರು ಪಡೆಯುತ್ತಾರೆ ಎಂಬುದಾಗಿದೆ.