Advertisement
ಕಳೆದೊಂದು ತಿಂಗಳಿಂದ ಟೊಮಾಟೊ ತನ್ನ ದರ ಏರಿಸಿಕೊಂಡು ಗ್ರಾಹಕರನ್ನು ಕಂಗಾಲಾಗಿಸಿದ್ದು, ಇದೀಗ ಟೊಮಾಟೊ ಬೆಳೆಯಲು ಮುಂದಾಗಿರುವ ರೈತರಿಗೆ ಸಸಿಗಳ ದರ ಏರಿಕೆ ಸದ್ದಿಲ್ಲದೇ ಕೈ ಕಚ್ಚುತ್ತಿದೆ. ಆರಂಭದಲ್ಲಿ 500 ರಿಂದ 600 ರೂ.ಗೆ ಮಾರಾಟಗೊಂಡ 15 ಕೆಜಿ ಟೊಮಾಟೊ ಬಾಕ್ಸ್ ಈಗ 2,000 ರೂ. ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮಾಟೊ ಕೆಜಿಗೆ ಈಗಲೂ 140 ರಿಂದ 150 ರೂ.ಗೆ ಕಡಿಮೆ ಇಲ್ಲ.
Related Articles
ತಜ್ಞರ ಪ್ರಕಾರ ಟೊಮಾಟೊ ದರ ಸದ್ಯಕ್ಕೆ ಇಳಿಕೆಯಾಗುವುದಿಲ್ಲ. ಇನ್ನೂ 2-3 ತಿಂಗಳು ಮಾರುಕಟ್ಟೆಯಲ್ಲಿ ಇದೇ ಬೆಲೆ ಇರುತ್ತದೆ ಎಂದು ಅಂದಾಜು ಮಾಡಿರುವ ಪರಿಣಾಮ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮಾಟೊ ಬೆಳೆಯಲು ಮುಂದಾಗಿದ್ದಾರೆ, ಇದರಿಂದಾಗಿ ನರ್ಸರಿಗಳಲ್ಲಿ ಸಸಿಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಬೆಲೆಯೂ ಹೆಚ್ಚಳವಾಗಿದೆ.
Advertisement
ಈ ಹಿಂದೆ ಒಂದು ಟೊಮಾಟೊ ಸಸಿಗೆ 40 ಪೈಸೆ ಇತ್ತು. ಟೊಮಾಟೊ ದರ ಏರಿಕೆ ಪರಿಣಾಮ ಈಗ ಒಂದು ಸಸಿಗೆ 1 ರೂ.ನಿಂದ 1.20, 1.30 ಪೈಸೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆ ಗುಣಮಟ್ಟದ ಸಸಿ ಸಿಗುವುದೂ ಕಷ್ಟ. ಆದರೂ ನರ್ಸರಿಗಳಲ್ಲಿ ಸಿಗುವ ಸಸಿಗಳನ್ನೇ ಖರೀದಿಸಿ ನಾಟಿ ಮಾಡುತ್ತಿದ್ದೇವೆ.ಶಂಕರ್, ಟೊಮಾಟೊ ಬೆಳೆಗಾರ, ಚಿಂತಾಮಣಿ. ಕಾಗತಿ ನಾಗರಾಜಪ್ಪ