Advertisement

ನಿರ್ದಿಷ್ಟ ಹುದ್ದೆಗೆ ಮೆರಿಟ್‌ ಮಾತ್ರ ಮಾನದಂಡ

09:55 AM Aug 23, 2017 | Team Udayavani |

ನವದೆಹಲಿ: ಇನ್ನು ಮುಂದೆ ಕೇಂದ್ರ ಸಚಿವರು ತಮಗೆ ಬೇಕಾದ ಖಾಸಗಿ ಕಾರ್ಯದರ್ಶಿಗಳು ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳ ನೇಮಕಕ್ಕೆ ಲಾಬಿ ನಡೆಸುವಂತಿಲ್ಲ. ಆಯಾ ಹುದ್ದೆಗಳಿಗೆ ಅರ್ಹತೆ ಒಂದೇ ಮಾನದಂಡವಾಗಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರ ಖಾಸಗಿ ಕಾರ್ಯದರ್ಶಿಗಳು ಮತ್ತು ವಿಶೇಷ ಕರ್ತವ್ಯ ಅಧಿಕಾರಿಗಳನ್ನು ಮೆರಿಟ್‌ ಹಾಗೂ ಪ್ರಾಮಾಣಿಕತೆ ಆಧರಿಸಿಯೇ ನಿಯೋಜನೆ ಮಾಡಲಾಗುವುದು. ಇದಕ್ಕಾಗಿ ಕೇಂದ್ರ ಸಚಿವರು ತಮಗೆ ಇಷ್ಟಬಂದ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಯಾವುದೇ ಲಾಬಿ ನಡೆಸುವಂತಿಲ್ಲ. ಪಾರದರ್ಶಕ ಆಡಳಿತ ನೀಡಲು ಅರ್ಹತೆ ಇರುವ ವ್ಯಕ್ತಿಗೆ ಮಾತ್ರವೇ ಇಂತಹ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದೆ. ‘3 ವರ್ಷಗಳ ಸುಸ್ಥಿರ ಮಾನವ ಸಂಪನ್ಮೂಲ ಕಾರ್ಯತತ್ಪರತೆ: ನವಭಾರತಕ್ಕೆ ಅಡಿಪಾಯ’ ಎಂಬ ಶೀರ್ಷಿಕೆಯಡಿ ಮಂಗಳವಾರ ಬಿಡುಗಡೆಯಾದ ಪುಸ್ತಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿವಿಧ ಸಚಿವಾಲಯದಡಿ ಒಟ್ಟು 291 ಜಂಟಿ ಕಾರ್ಯದರ್ಶಿ ಹುದ್ದೆಗಳಿದ್ದು, ಈ ಪೈಕಿ ಐಎಎಸ್‌ಯೇತರ ಅಧಿಕಾರಿಗಳು 120 ಜಂಟಿ ಕಾರ್ಯ ದರ್ಶಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next