Advertisement

ವೀಸಾ ಬೇಕಿದ್ದರೆ ಫೇಸ್‌ಬುಕ್‌ ಮಾಹಿತಿ ಕೊಡಿ

01:32 AM Jun 03, 2019 | sudhir |

ವಾಷಿಂಗ್ಟನ್‌: ಅಮೆರಿಕಕ್ಕೆ ವೀಸಾ ಪಡೆಯುವುದು ಇನ್ನು ಸುಲಭವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ, ಅವಹೇಳನಕಾರಿ ಪೋಸ್ಟ್‌ ಮಾಡುತ್ತಿದ್ದರಂತೂ ಅಮೆರಿಕದ ವೀಸಾ ಸಿಗುವುದೇ ಕಷ್ಟವಾದೀತು. ಅಮೆರಿಕ ರೂಪಿಸಿದ ಹೊಸ ನೀತಿಯ ಪ್ರಕಾರ, ವಿದೇಶಿಯರು ಅಮೆರಿಕಕ್ಕೆ ಆಗಮಿಸುವ ಮುನ್ನ 5 ವರ್ಷಗಳ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಮಾಹಿತಿ ನೀಡಬೇಕು. ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿಲ್ಲ ಎಂದೂ ಆಯ್ಕೆ ಮಾಡುವ ಅವಕಾಶವಿದೆ.

Advertisement

ಒಂದು ವೇಳೆ ಹಾಗೇನಾದರೂ ಹೇಳಿ, ಅದು ಸುಳ್ಳು ಎಂದು ಕಂಡುಬಂದರೆ ಅವರು ಗಂಭೀರ ಕ್ರಮವನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮವು ಉಗ್ರರ ಬಗ್ಗೆ ಒಲವು ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಅತ್ಯಂತ ಪರಿಣಾಮಕಾರಿ ಮೂಲ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಅಪಾಯಕಾರಿ ವ್ಯಕ್ತಿಯನ್ನೂ ಈ ಮೂಲಕ ನಾವು ಸ್ಪಷ್ಟವಾಗಿ ಗುರುತಿಸಬಹುದು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಸಾಮಾಜಿಕ ಮಾಧ್ಯಮ ಖಾತೆ ಮಾಹಿತಿ ಪಡೆದು, ಹಿನ್ನೆಲೆ ಪರಿಶೀಲನೆ ವೇಳೆ ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಯಾಣದ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಮಾಹಿತಿ ನೀಡಬೇಕು ಎಂಬ ನೀತಿಯನ್ನೂ ತರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next