ಹೊಸದಿಲ್ಲಿ : ”ಮೋದಿ ಭರವಸೆಗಳು ಪ್ರಾಮಿಸ್ ಟೂತ್ ಪೇಸ್ಟ್‌ನ ಹಾಗೆ” ಎಂದು ಲೇವಡಿ ಮಾಡುವ ಮೂಲಕ ಬಹಭಾಷಾ ಚಿತ್ರ ನಟ, ಕನ್ನಡಿಗ ಪ್ರಕಾಶ್ ರೈ ಅವರು ಬೆಂಗಳೂರು ರಾಲಿಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟವಾಗಿ ಟೀಕಿಸಿದ್ದಾರೆ.
“2014ರಲ್ಲಿ ಮಾರಲಾಗಿದ್ದ ಪ್ರಾಮಿಸ್ ಟೂತ್ ಪೇಸ್ಟ್ ರೈತರು ಮತ್ತು ನಿರುದ್ಯೋಗಿ ಯುವಕರ ಮೊಗದಲ್ಲಿ ಮಂದಹಾಸವನ್ನು ತರಲು ವಿಫಲವಾಗಿದೆ’ ಎಂದು ಪ್ರಕಾಶ್ ರೈ ಟ್ವಿಟರ್‌ನಲ್ಲಿ ಕಟಕಿಯಾಡಿದ್ದಾರೆ.
ಪ್ರಕಾಶ್ ಅವರು ಈ ಹಿಂದೆಯೂ ಅನೇಕ ಬಾರಿ ಮೋದಿ ನೇತೃತ್ವದ ಎನ್ ಡಿ ಎ ಸರಕಾರವನ್ನು ಟೀಕಿದವರಾಗಿದ್ದಾರೆ.
ಬೆಂಗಳೂರು ರಾಲಿಯಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ನೀಡಿ ಭರವಸೆಗಳು ಈಡೇರುವುದೆಂದು ಜನರು ನಂಬಿದಲ್ಲಿ ಅವರು 2104ರ ಪ್ರಾಮಿಸ್ಟ್ ಟೂತ್‌ಪೇಸ್ಟ್ ಪರಿಣಾಮವನ್ನೇ ಕಾಣಬಹುದು ಎಂದು ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.
ಮೋದಿ ಅವರು ಬೆಂಗಳೂರು ಭಾಷಣದಲ್ಲಿ ಕಾಂಗ್ರೆಸ್ ಆಡಳಿತೆಯ ಕರ್ನಾಟಕ ರಾಜ್ಯದಲ್ಲಿ ಮಾಫಿಯಾಗಳ ನಂಗಾನಾಚ್ ನಡೆಯುತ್ತಿದೆ ಎಂದಿದ್ದರು. ರಾಜ್ಯದಲ್ಲಿ ಅಭಿವೃದ್ಧಿಯ ಕೊರತೆ ಇದ್ದು ರಾಜಕೀಯ ಕೊಲೆಗಳು ನಡೆಯುತ್ತಿವೆ; ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ ಎಂದು ಟೀಕಿಸಿದ್ದರು.