ಮಣಿಪಾಲ: ಕೃಷ್ಣ ಜನ್ಮಭೂಮಿ ಮಥುರಾ ವಿವಾದದ ಕುರಿತು ಶ್ರೀ ಕೃಷ್ಣ ವಿರಾಜಮಾನ್ ಅವರ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ಮಾನ್ಯ ಮಾಡಿದೆ. ಅಕ್ಟೋಬರ್ 12ರಂದು ಶ್ರೀ ಕೃಷ್ಣ ವಿರಾಜಮನ್ ಪರವಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಅದರಲ್ಲಿ ಆವರಣವನ್ನು ಅತಿಕ್ರಮಣ ಮಾಡಿ ರಾಯಲ್ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ರಾಯಲ್ ಮಸೀದಿಯ ಜಮೀನು ಸೇರಿದಂತೆ 13.37 ಎಕ್ರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕೋರಲಾಗಿದೆ.
ಈ ಪ್ರಕರಣದಲ್ಲಿ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸೇರಿದಂತೆ 4 ಟ್ರಸ್ಟ್ ಗಳಿಗೆ ಶುಕ್ರವಾರ ಜಿಲ್ಲಾ ನ್ಯಾಯಾಲಯ ನೋಟಿಸ್ ಕಳುಹಿಸಿದೆ. ಮುಂದಿನ ವಿಚಾರಣೆ ನವೆಂಬರ್ 18ರಂದು ನಡೆಯಲಿದೆ. ಶ್ರೀ ಕೃಷ್ಣ ವಿರಾಜಮಾನ್ ಹರಿಶಂಕರ್ ಜೈನ್ ಪರ ವಕೀಲರು, ವಕ್ಫ್ ಮಂಡಳಿಯಲ್ಲದೆ, ಶಾಹಿ ಮಸೀದಿ ಈದ್ಗಾ ಟ್ರಸ್ಟ್, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್, ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
Related Articles
ಸೆಪ್ಟಂಬರ್ 30ರಂದು ಸಿವಿಲ್ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶದ ಅನಂತರ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.
ವಿವಾದ ಏನು?
1951ರಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು ಪುನರ್ನಿರ್ಮಿಸಲು ಮತ್ತು ಟ್ರಸ್ಟ್ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಇದಾದ ಬಳಿಕ 1958 ರಲ್ಲಿ ಶ್ರೀ ಕೃಷ್ಣ ಜನ್ಮ ಸ್ಥಾನ್ ಸೇವಾ ಸಂಘ ಎಂಬ ಸಂಘಟನೆಯನ್ನು ರಚಿಸಲಾಯಿತು. ಆದರೆ ಈ ಸಂಸ್ಥೆಯು ಕಾನೂನುಬದ್ಧವಾಗಿ ಭೂಮಿಯನ್ನು ಹೊಂದಿಲ್ಲದಿದ್ದರೂ, ಟ್ರಸ್ಟ್‌ಗೆ ನಿಯೋಜಿಸಲಾದ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿತು.
1964ರಲ್ಲಿ ಈ ಸಂಸ್ಥೆಯು ಇಡೀ ಭೂಮಿಯ ಮೇಲೆ ಹಕ್ಕು ಸಾಧಿಸಲು ಸಿವಿಲ್ ಮೊಕದ್ದಮೆ ಹೂಡಿತು, ಆದರೆ 1968ರಲ್ಲಿ ಸ್ವತಃ ಮುಸ್ಲಿಂ ಮರ ಜತೆ ಒಪ್ಪಂದದ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಂಡಿತು. ಈ ಒಪ್ಪಂದದ ಪ್ರಕಾರ ಮುಸ್ಲಿಂ ಕಡೆಯವರು ಕೆಲವು ಪ್ರದೇಶವನ್ನು ವಾಲಯಕ್ಕೆ ಬಿಟ್ಟುಕೊಟ್ಟರು. ಬದಲಾಗಿ ಅವರಿಗೆ ಹತ್ತಿರದ ಕೆಲವು ಸ್ಥಳಗಳನ್ನು ನೀಡಲಾಯಿತು. ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಯನ್ನು 13.37 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದು ಪ್ರಸ್ತುತ 10.50 ಎಕ್ರೆ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಆದರೆ ಅರ್ಜಿದಾರರು ಇಡೀ ಜಮೀನಿನ ಮಾಲಕತ್ವವನ್ನು ಕೋರಿದ್ದಾರೆ.