Advertisement

Bihar: ಬಿಹಾರದಲ್ಲಿ ಈಗ ರಜೆ ವಿವಾದ

12:53 AM Nov 29, 2023 | Team Udayavani |

ಪಾಟ್ನಾ:ಬಿಹಾರದಲ್ಲಿ ಮುಂದಿನ ವರ್ಷದ ರಜೆಗಳ ಪಟ್ಟಿಯಲ್ಲಿ ಹಿಂದೂಗಳ ಹಬ್ಬಕ್ಕೆ ರಜೆ ಕಡಿತಗೊಳಿಸಿ, ಮುಸ್ಲಿಂ ಉತ್ಸವಗಳಿಗೆ ಹೆಚ್ಚಿನ ರಜೆ ನೀಡಲಾಗಿದೆ ಎಂಬ ವಿಚಾರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಇಂಥ ಕ್ರಮ ಕೈಗೊಳ್ಳುವ ಮೂಲಕ ಬಿಹಾರದಲ್ಲಿ ಇಸ್ಲಾಮೀಕರಣಗೊಳಿಸಲಾಗುತ್ತಿದೆ ಮತ್ತು ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ತುಷ್ಟೀಕರಣಗೊಳಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

ಶಿಕ್ಷಣ ಇಲಾಖೆ ಸೋಮವಾರ ಹೊರಡಿಸಿದ್ದ 2024ರ ಪಟ್ಟಿಯ ಪ್ರಕಾರ ಶ್ರೀಕೃಷ್ಣ ಜನ್ಮಾಷ್ಠಮಿ, ರಕ್ಷಾಬಂಧನ, ರಾಮನವಮಿ, ಶಿವರಾತ್ರಿ, ವಸಂತ ಪಂಚಮಿ, ಜೀವಿತಪುತ್ರಿಕಾ ಹಬ್ಬಗಳಿಗೆ ನೀಡಲಾಗುತ್ತಿದ್ದ ರಜೆ ರದ್ದುಗೊಳಿಸಲಾಗಿದೆ. ಮುಸ್ಲಿಂ ಸಮುದಾಯದವರು ಹೆಚ್ಚು ಇರುವ ಸ್ಥಳಗಳಲ್ಲಿ ಶುಕ್ರವಾರ ರಜೆ ನೀಡುವ ಬಗ್ಗೆಯೂ ಸೂಚಿಸಲಾಗಿದೆ. ಗಾಂಧಿಜಯಂತಿಯಂದು ನೀಡಲಾಗುವ ರಜೆ ರದ್ದುಪಡಿಸಲಾಗಿದೆ. ಈ ದುಲ್‌ ಫಿತರ್‌ (ರಂಜಾನ್‌)ಗೆ 3 ದಿನ ರಜೆ ನೀಡಲಾಗಿದೆ.

ಬಿಜೆಪಿ ನಾಯಕರು ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮುಂದಿನ ವರ್ಷದ ರಜೆಯ ಪಟ್ಟಿಯ ವರದಿಗಳ ಕ್ಲಿಪ್ಪಿಂಗ್‌ಗಳನ್ನು ಅಪ್‌ಲೋಡ್‌ ಮಾಡಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿªರೆ. ಕೇಂದ್ರ ಸಚಿವ ಅಶ್ವಿ‌ನಿ ಕುಮಾರ್‌ ಚೌಬೆ ವಿಡಿಯೋ ಸಂದೇಶದಲ್ಲಿ “ಬಿಹಾರ ಸಿಎಂ ತುಷ್ಟೀಕರಣದ ಮುಖ್ಯಸ್ಥ. ಸರ್ಕಾರದ ನಿರ್ಧಾರ ಹಿಂದೂ ವಿರೋಧಿ ಧೋರಣೆ ತೋರಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ. ರಾಜ್ಯಸಭಾ ಸದಸ್ಯ ಸುಶೀಲ್‌ ಕುಮಾರ್‌ ಮೋದಿ “ಪಟ್ಟಿಯನ್ನು ತಕ್ಷಣ ವಾಪಸ್‌ ಪಡೆಯಬೇಕು. ಇದು ಹಿಂದೂ ವಿರೋಧಿ ಎಂದಿದ್ದಾರೆ. ಕೇಂದ್ರ ಸಚಿವ ನಿತ್ಯಾನಂದ ರಾಯ್‌, ಗಿರಿರಾಜ್‌ ಸಿಂಗ್‌ ಸೇರಿದಂತೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next