ತಣ್ಣಗೆ ರಾಜ್ಯಾದ್ಯಂತ ಓಡಾಡುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರಿಂದ ಆಹ್ವಾನ ಪಡೆದ ಮೇಲೆ ದೇವಸ್ಥಾನಗಳ ಭೇಟಿ ಆರಂಭಿಸಿದ್ದಾರೆ.
Advertisement
ಭಾನುವಾರ ಸಂಜೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಶ್ರೀರಂಗಂ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದಕುಮಾರಸ್ವಾಮಿ, ಸೋಮವಾರ ದೆಹಲಿಗೆ ತೆರಳುವ ಮುನ್ನ ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಹೊಳೇನರಸೀಪುರಕ್ಕೆ ತೆರಳಿ, ನಂತರ ಲಕ್ಷ್ಮೀನರಸಿಂಹ ದೇವಸ್ಥಾನ, ಹರದನಹಳ್ಳಿ ಶಿವ ದೇವಾಲಯ, ರಂಗನಾಥಸ್ವಾಮಿ ದೇವಾಲಯ ಮತ್ತು ಎಲಿಮಲಕ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುವರು.
ಬಳಿಕ, ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜತೆ ಸಮಾಲೋಚನೆ ನಡೆಸುವರು.
ದಯವಿಟ್ಟು ರಾಜ್ಯಕ್ಕೆ ಬಂದು ಜಲಾಶಯಗಳ ಪರಿಸ್ಥಿತಿ ಮತ್ತು ರೈತರು ಏನಾಗಿದ್ದಾರೆ ಎಂಬುದನ್ನು ನೋಡಿ. ಅದರ ಬಳಿಕ ನಿಮಗೆ ಕಾವೇರಿ ನದಿಯಿಂದ ನೀರು ಬೇಕೆ ಎಂಬುದನ್ನು ಚರ್ಚೆ ಮಾಡೋಣ.
– ಎಚ್.ಡಿ.ಕುಮಾರಸ್ವಾಮಿ, ನಿಯೋಜಿತ ಸಿಎಂ.