Advertisement
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ಇಂದು(ಸೋಮವಾರ, ಮೇ 17) ನಡೆದ ಕೋವಿಡ್ ಸೋಂಕಿನ ಕುರಿತು ಉನ್ನತ ಮಟ್ಟದ ಮಂತ್ರಿಗಳ 26 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Related Articles
Advertisement
ಎನ್ ಸಿ ಡಿ ಸಿ ನಿರ್ದೇಶಕ ಡಾ. ಸುಜೀತ್ ಕೆ ಸಿಂಗ್ ಅವರು ಭಾರತದಲ್ಲಿ ವರದಿಯಾಗುತ್ತಿರುವ SARS-CoV-2 ಮತ್ತು ಕೋವಿಡ್ ರೂಪಾಂತರಗಳ ಬಗ್ಗೆ ವಿವರವಾದ ವರದಿಯನ್ನು ಮಂಡಿಸಿದರು.
ಬಿ.1.1.7 ಮತ್ತು ಬಿ .1.617 ನಂತಹ ರೂಪಾಂತರಗಳ ಹರಡುವಿಕೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಅವರು ತೋರಿಸಿದರು. ಫೆಬ್ರವರಿ ಮತ್ತು ಮಾರ್ಚ್ ನಡುವೆ ಪಂಜಾಬ್ ಮತ್ತು ಚಂಡೀಗಡದಲ್ಲಿ ಸಂಗ್ರಹಿಸಲಾದ ಮಾದರಿಗಳಲ್ಲಿ ಬಿ 1.1.7 ರೂಪಾಂತರಿ (ಯುಕೆ ರೂಪಾಂತರ) ಪ್ರಧಾನವಾಗಿ ಕಂಡುಬಂದಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಏನನ್ನೂ ಮಾಡ್ತಿಲ್ಲ : ಉಗ್ರಪ್ಪ