Advertisement

ಈಗ ಅರುಣೋದಯ

12:08 AM Aug 07, 2019 | Lakshmi GovindaRaj |

“ಜಮ್ಮು ಕಾಶ್ಮೀರಕ್ಕೆ ಸಂಬಂಧಪಟ್ಟ ಎರಡು ವಿಧೇಯಕಗಳು ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆದ ಘಳಿಗೆ, ಸಂಸದೀಯ ಪ್ರಜಾಪ್ರಭುತ್ವದಲ್ಲೇ “ಮಹತ್ವದ ಸಂದರ್ಭ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಕಾಶ್ಮೀರದ ಜನತೆಯ ಅಭಿವೃದ್ಧಿಯ ಅರುಣೋದಯಕ್ಕೆ ಇದು ನಾಂದಿ ಹಾಡಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

“ಪಟ್ಟಭದ್ರ ಹಿತಾಸಕ್ತಿಯ ಶಕ್ತಿಗಳು ದಶಕಗಳಿಂದ ಆಳ್ವಿಕೆ ನಡೆಸಿದ್ದರೂ, ಜಮ್ಮು-ಕಾಶ್ಮೀರದ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಅಥವಾ ಅವರನ್ನು ಸಬಲರನ್ನಾಗಿಸುವಲ್ಲಿ ನಿರ್ಲಕ್ಷ್ಯ ತೋರಿದ್ದರು. ಅಲ್ಲಿನ ಜನರನ್ನು ಭಾವನಾತ್ಮಕ ಬ್ಲಾಕ್‌ವೆುàಲ್‌ಗ‌ಳಂಥ ಸಂಕೋಲೆಗಳಿಂದ ಬಂಧಿಸಿದ್ದರು. ಅಂಥ ಸಂಕೋಲೆಗಳಿಂದ ಆ ರಾಜ್ಯವನ್ನು ನಾವು ಬಿಡುಗಡೆ ಮಾಡಿದ್ದೇವೆ. ಉತ್ತಮ ನಾಳೆಗಳಿಗೆ ಮುನ್ನುಡಿ ಬರೆಯುವ ಉಷಾಕಿರಣವೊಂದು ಅಲ್ಲಿ ಸದ್ಯದಲ್ಲೇ ಉದಯವಾಗಲಿದೆ” ಎಂದು ಅವರು ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next