Advertisement

ಬ್ಯಾಂಕ್‌ ಖಾತೆಗೆ, 50,000 ರೂ. ಮೀರಿದ ವ್ಯವಹಾರಕ್ಕೆ ಆಧಾರ್‌ ಕಡ್ಡಾಯ

04:24 PM Jun 16, 2017 | udayavani editorial |

ಹೊಸದಿಲ್ಲಿ : ಕಪ್ಪು ಹಣವನ್ನು ತಡೆಯುವ ಯತ್ನದಲ್ಲಿ ಕೇಂದ್ರ ಸರಕಾರ ಹೊಸದಾಗಿ ತೆರೆಯಲ್ಪಡುವ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ನಂಬರ್‌ ನೀಡುವುದನ್ನು ಹಾಗೂ 50,000 ರೂ. ಮೇಲ್ಪಡುವ ಹಣಕಾಸು ವ್ಯವಹಾರಗಳಲ್ಲಿ ಆಧಾರ್‌ ಕಾರ್ಡ್‌ ಬಳಸುವುದನ್ನು ಕಡ್ಡಾಯ ಮಾಡಿದೆ. 

Advertisement

ಎಲ್ಲ  ಹಾಲಿ ಬ್ಯಾಂಕ್‌ ಖಾತೆದಾರರು 2017ರ ಡಿಸೆಂಬರ್‌ 31ರೊಳಗೆ ಬ್ಯಾಂಕ್‌ಗಳಿಗೆ ತಮ್ಮ ಆಧಾರ್‌ ಕಾರ್ಡ ಸಲ್ಲಿಸುವುದನ್ನು ಸರಕಾರ ಕಡ್ಡಾಯ ಮಾಡಿದೆ. ಇದಕ್ಕೆ ತಪ್ಪಿದಲ್ಲಿ ಖಾತೆಗಳು ಅಸಿಂಧುವಾಗಲಿವೆ. 

ಇದೇ ವೇಳೆ ಆದಾಯ ತೆರಿಗೆ ಇಲಾಖೆ ಕೂಡ ಎರಡು ಲಕ್ಷ ರೂ. ಮೀರಿ ನಗದು ವ್ಯವಹಾರ ಮಾಡುವವರಿಗೆ ಎಚ್ಚರಿಕೆ ನೀಡಿದೆ. 2 ಲಕ್ಷ  ಹಾಗೂ ಅದನ್ನು ಮೀರಿದ ನಗದನ್ನು ಸ್ವೀಕರಿಸುವವರು ಅಷ್ಟೇ ಮೊತ್ತದ ದಂಡವನ್ನು ತೆರಬೇಕಾಗುವುದು ಎಂದು ಐಟಿ ಇಲಾಖೆ ಹೇಳಿದೆ. 

ಕೇಂದ್ರ ಸರಕಾರ ಇದೇ ವರ್ಷ ಎಪ್ರಿಲ್‌ 1ರಿಂದ, 2017ರ ಹಣಕಾಸು ಕಾಯಿದೆ ಮೂಲಕ, 2 ಲಕ್ಷ ಅಥವಾ ಅದನ್ನು ಮೀರುವ ನಗದು ವ್ಯವಹಾರ ನಡೆಸುವುದನ್ನು ನಿಷೇಧಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next