ಹೊಸದಿಲ್ಲಿ : ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದಕ್ಕೆ ಮತ್ತು ಪ್ಯಾನ್ ಕಾರ್ಡ್ ಪಡೆಯುವುದಕ್ಕೆ 2017ರ ಜುಲೈ 1ರಿಂದ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ.
ಇದಕ್ಕಾಗಿ ಸರಕಾರವು 1961 ಆದಾಯ ತೆರಿಗೆ ಕಾಯಿದೆಗೆ ಆವಶ್ಯಕ ತಿದ್ದುಪಡಿಯನ್ನು ತರುವ ದಿಶೆಯಲ್ಲಿ ಕಾರ್ಯೋನ್ಮುಖವಾಗಿದೆ. ಆದಾಯ ತೆರಿಗೆ ರಿಟರ್ನ್ ಮತ್ತು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಜೋಡಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಮಾಡಲಾಗಿತ್ತು ಮತ್ತು ಆ ಬಗ್ಗೆ ಈಗ ಸಕ್ರಿಯ ಚರ್ಚೆ ನಡೆಯುತ್ತಿದೆ.
2015-16ರ ಐಟಿಆರ್‌ನಲ್ಲಿ ಕೇಂದ್ರ ನೇರ ತೆರಿಗೆಗಳ ಮಂಡಳಿಯು ಹೊಸ ಕಾಲಂ ಅನ್ನು ಪರಿಚಯಿಸಿದೆ. ಇದರಲ್ಲಿ ರಿಟರ್ನ್ ಸಲ್ಲಿಕೆದಾರನು ತನ್ನ ಆಧಾರ್ ನಂಬ್ರವನ್ನು ನಮೂದಿಸಬೇಕಾಗುತ್ತದೆ. ಇದನ್ನು ಒನ್ ಟೈಮ್ ಪಾಸ್ ವರ್ಡ್ ಮೂಲಕ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ದೃಢಪಡಿಸಲಿದೆ.