Advertisement
ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಕೇಂದ್ರ ಪುರಾತತ್ವ ಇಲಾಖೆ, ಸಾರ್ವಜನಿಕ ಉದ್ಯಮಗಳ ಪ್ರಮುಖ ಸಂಸ್ಥೆ ಬಿಇಎಲ್ ಹಾಗೂ ದೇಶದ ಪ್ರಮುಖ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ ಐಐಟಿ ಸೇರಿ 27 ಸಂಸ್ಥೆಗಳು ಕೈ ಜೋಡಿಸಿ ಈ ಮಹತ್ವದ ಯೋಜನೆ ರೂಪಿಸಿವೆ.
Related Articles
ಹಂಪಿಯ ಇತಿಹಾಸವನ್ನು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಉಣ ಬಡಿಸಲು ಮೂರು ಹಂತಗಳ ಮಹತ್ವದ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಹಂಪಿಯಲ್ಲಿ ಉತVನನ ನಡೆಸಿದ ನಂತರ ದೊರೆತಿರುವ ಶಿಲ್ಪಕಲಾ ಸ್ಮಾರಕಗಳು, ಶಾಸನಗಳು, ಅನೇಕ ಐತಿಹಾಸಿಕ ಮಹತ್ವ ಇರುವ ವಸ್ತುಗಳನ್ನು ಸಂಗ್ರಹಿಸಿಡಲಾದ ವಸ್ತು ಸಂಗ್ರಹಾಲಯದ ಉನ್ನತೀಕರಣ ಈ ಯೋಜನೆಯ ಮೊದಲ ಹೆಜ್ಜೆಯಾಗಿದೆ. ಇಲ್ಲಿ ಪ್ರಸ್ತುತವಿರುವ ಸ್ಮಾರಕಗಳ ಕುರಿತು ವಿವರಣಾತ್ಮಕ ಮಾಹಿತಿ, ತ್ರೀ-ಡಿ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.
Advertisement
ಬಳಿಕ ಸ್ಮಾರಕಗಳ ಅದರ ಹಿಂದಿರುವ ಇತಿಹಾಸ, ಗತ ವೈಭವವನ್ನು ಪ್ರವಾಸಿಗರು ಆ ಕಾಲದಲ್ಲೇ ತಾವು ಇದ್ದಂತೆ ಭಾಸವಾಗಿಸಲು ಇಮ್ಮೆರ್ಸಿವ್ ಎಕ್ಸ್‌ಪೀರಿಯೆನ್ಸ್ ಕಾರ್ಯಕ್ರಮ ರೂಪಿಸಲಾಗಿದ್ದು, ಇದು ಯೋಜನೆಯ ಎರಡನೇ ಹಂತವಾಗಿದೆ. ವಿಜಯನಗರ ಸಾಮ್ರಾಜ್ಯದ ಆರಂಭ, ಪತನಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ 1;15 ನಿಮಿಷದಲ್ಲಿ ಪ್ರವಾಸಿಗರಿಗೆ ವಿವಿಧ ಭಾಷೆಗಳಲ್ಲಿ ಹೇಳುವ ಕಾರ್ಯ ಇಮ್ಮೆರ್ಸಿವ್ ಎಕ್ಸ್‌ಪೀರಿಯೆನ್ಸ್ ಕಾರ್ಯಕ್ರಮದ ಮೂಲಕ ಸಾಕಾರವಾಗಲಿದೆ.ಬಳಿಕ ವರ್ಚುಚಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಹಂಪಿಯ ಸ್ಮಾರಕಗಳು, ಶಿಲ್ಪ, ವಾಸ್ತುಶಾಸ್ತ್ರ, ಭಗ್ನಗೊಂಡ ಸ್ಮಾರಕಗಳ ಪರಿಚಯ ಮಾಡಿಸುವುದು ಯೋಜನೆಯ ಅಂತಿಮ ಭಾಗವಾಗಿದೆ.
ಇದರ ಜತೆಗೆ, ಸ್ಪರ್ಶ ಸಂವೇದಿ ಪರದೆಗಳ ಮೇಲೆ ಹಂಪಿಯ ವಿಸ್ತಾರವಾದ ಸ್ಮಾರಕಗಳ ಚಿತ್ರಗಳನ್ನು ಮೂಡಿಸಿ, ನಿರ್ದಿಷ್ಟ ಸ್ಮಾರಕವನ್ನು ಸ್ಪರ್ಶಿಸಿದಾಗ ಆ ಸ್ಮಾರಕದ ಪೂರ್ವ ಪರ ಮಾಹಿತಿ, ಭಗ್ನಗೊಂಡ ವಿಗ್ರಹಗಳ ಪೂರ್ಣ ರೂಪದ ವಿವರಣೆಗಳನ್ನು ಈ ತಂತ್ರಜ್ಞಾನದಿಂದ ದೊರಕಿಸಿಕೊಡಲು ಚಿಂತಿಸಲಾಗಿದೆ.ಇದಲ್ಲದೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸುವ ಓಂಟೋಲಜಿ ತಂತ್ರಜ್ಞಾನವನ್ನೂ ಈ ಯೋಜನೆಯಲ್ಲಿ ಬಳಸಿಕೊಳ್ಳುವ ಉದ್ದೇಶವಿದೆ.
ಬಿಇಎಲ್ ಸಿಎಸ್‌ಆರ್ ನಿಧಿ ಬಳಕೆ:ಈ ಮಹತ್ವದ ಯೋಜನೆಗೆ ಸಾರ್ವಜನಿಕ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿ., ತನ್ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯನ್ನು (ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ-ಸಿಎಸ್‌ಆರ್) ನೀಡಲು ಮುಂದೆ ಬಂದಿದೆ.
ದೇಶದ ವಿವಿಧ ಐಐಟಿಗಳು ಸೇರಿ ಪರಂಪರೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಹೊಸ ಪೀಳಿಗೆಗೆ ಪರಿಚಯಿಸಲು ಆರಂಭವಾಗಿರುವ 27 ಸಂಸ್ಥೆಗಳು, ಕೇಂದ್ರ ಪುರಾತತ್ವ ಸಂಶೋಧನಾ ಇಲಾಖೆಯ ಪಾಲುದಾರ ಸಂಸ್ಥೆಗಳಾಗಿವೆ. ಇವೆಲ್ಲವೂ ಸೇರಿ ಒಟ್ಟು 17 ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸಿದ್ದು ಇವುಗಳ ಅಧ್ಯಯನ ನಡೆದಿದೆ. ಈ ಯೋಜನೆಯನ್ನು ಸ್ಟಾರ್ಟ್ ಅಪ್ ಸಂಸ್ಥೆಗಳು ಜಾರಿಗೊಳಿಸಲಿದ್ದು, ಈಚೆಗೆ ವಿವಿಧ ಪಾಲುದಾರ ಸಂಸ್ಥೆಗಳು ಹಂಪಿಯ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಕ್ಷೇತ್ರ ಕಾರ್ಯ ಕೈಗೊಂಡವು. ಇಂಡಿಯನ್ ಹೆರಿಟೇಜ್ ಇನ್ ಡಿಜಿಟಲ್ ಸ್ಪೇಸ್ ಹೆಸರಿನ ಯೋಜನೆ ಅಡಿ ಡಿಜಿಟಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಈ ತಂಡ ಅಧ್ಯಯನ ನಡೆಸಿ ಕಂಡುಕೊಂಡ ಅಂಶಗಳನ್ನು ಒಳಗೊಂಡ ಯೋಜನಾ ವರದಿಯನ್ನು ಸಂಸ್ಕೃತಿ ಇಲಾಖೆಗೆ ಸಲ್ಲಿಸಲಿದೆ. ನಂತರ ಸೂಕ್ತ ಯೋಜನೆ ರೂಪಿಸಿ ಅಗತ್ಯವಿರುವ ಹಣಕಾಸು ನೆರವಿಗೆ ಬಿಇಎಲ್ ಸಂಸ್ಥೆ ಸಂಪರ್ಕಿಸಲಾಗುವುದು.
-ಪಿ.ಎಲ್.ಸಾಹು, ಜೆಡಿ, ಸಂಸ್ಕೃತಿ ಇಲಾಖೆ. ಹಂಪಿಯ ಸ್ಮಾರಕಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ರಮ ಶೀಘ್ರವೇ ಆರಂಭವಾಗಲಿದೆ. ಒಂದು ವರ್ಷದ ಅವಧಿಯಲ್ಲಿ ಗುರಿ ಸಾಧಿಸುವ ಕುರಿತು ಪಾಲುದಾರ ಸಂಸ್ಥೆಗಳು ಯೋಜನೆ ರೂಪಿಸಿವೆ.
– ಕೆ.ಮೂರ್ತೀಶ್ವರಿ. ಎಸ್.ಎ., ಬೆಂಗಳೂರು ಹಾಗೂ ಹಂಪಿ ಕಿರು ವೃತ್ತ – ಎಂ.ಮುರಳಿಕೃಷ್ಣ