100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ಹೊಂದಿರುವ ಎಲ್ಲ ಉದ್ಯಮಗಳೂ ನ.1ರಿಂದ ತಮ್ಮ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಚಲನ್ ಅನ್ನು ಇ-ಚಲನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. 30 ದಿನಗಳ ಒಳಗಾಗಿ ಈ ಪ್ರಕ್ರಿಯೆ ನಡೆಯಬೇಕು.
Advertisement
ಲ್ಯಾಪ್‌ಟಾಪ್ ಆಮದುಲ್ಯಾಪ್ಟಾಪ್ಗ್ಳು, ಟ್ಯಾಬ್ಲೆಟ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಅ.30ರವರೆಗೆ ಸಡಿಲಿಸಿದೆ. ಈ ಗಡುವು ಮುಗಿಯುವ ಕಾರಣ ನ.1ರಿಂದ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದೆ.
ಬಿಎಸ್‌ಇ(ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ತನ್ನ ಈಕ್ವಿಟಿ ಡಿರೈವೇಟಿವ್ ವಿಭಾಗದ ಮೇಲಿನ ವಹಿವಾಟು ಶುಲ್ಕವನ್ನು ಹೆಚ್ಚಳ ಮಾಡಿದೆ. ಆರಂಭದಲ್ಲಿ ಎಸ್ ಆ್ಯಂಡ್ ಪಿ ಬಿಎಸ್‌ಇ ಸೆನ್ಸೆಕ್ಸ್ ಆಯ್ಕೆಯ ಮೇಲೆ ಇದು ಅನ್ವಯವಾಗಲಿದೆ. ಅದರಂತೆ, 3 ಕೋಟಿ ರೂ.ವರೆಗಿನ ವಹಿವಾಟಿಗೆ ಪ್ರತಿ ಕೋಟಿಗೆ 500 ರೂ. ಹಾಗೂ 3 ಕೋಟಿಯಿಂದ 100 ಕೋಟಿ ರೂ.ವರೆಗಿನ ವಹಿವಾಟಿಗೆ ಪ್ರತಿ ಕೋಟಿಗೆ 3,750 ರೂ. ಶುಲ್ಕ ವಿಧಿಸಲಾಗುತ್ತದೆ. ಎಲ್‌ಪಿಜಿ ದರ:
ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಇಂದು ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು ಅಥವಾ ಯಥಾಸ್ಥಿತಿ ಮುಂದುವರಿಯಬಹುದು.
Related Articles
ಅನಿವಾರ್ಯ ಕಾರಣಗಳಿಂದಾಗಿ ಪ್ರೀಮಿಯಂ ಪಾವತಿಸದೇ ಎಲ್‌ಐಸಿ ಲ್ಯಾಪ್ಸ್ ಆಗಿದ್ದರೆ, ಅಂಥವರಿಗೆ ತಮ್ಮ ಜೀವವಿಮೆಯನ್ನು ಪುನಶ್ಚೇತನ ಮಾಡಿಕೊಳ್ಳಲು ಭಾರತೀಯ ಜೀವವಿಮಾ ನಿಗಮ ನೀಡಿದ್ದ ಕಾಲಾವಕಾಶ ಮಂಗಳವಾರಕ್ಕೆ ಮುಗಿದಿದೆ. 2 ತಿಂಗಳ ಕಾಲ ನಡೆದ “ಎಲ್‌ಐಸಿ ಪುನಶ್ಚೇತನ ಅಭಿಯಾನ’ ಅ.31ಕ್ಕೆ ಕೊನೆಯಾದ ಕಾರಣ, ನ.1ರಿಂದ ಪುನಶ್ಚೇತನಕ್ಕೆ ಅವಕಾಶ ಇರುವುದಿಲ್ಲ.
Advertisement