Advertisement
ಎಲ್ಲ ತಾಲೂಕಿನಲ್ಲಿಯೂ ತುಳು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ತಾಲೂಕು ತುಳು ಸಾಹಿತ್ಯ ಸಮ್ಮೇಳನ ಮಾದರಿಯಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಸಮ್ಮೇಳನದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ಸಮಿತಿ ಸಂಚಾಲಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
Related Articles
ಸಂಚಾಲಕ ಉಮೇಶ್ ಸಾಯಿರಾಂ, ಮೆರವಣಿಗೆ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ವೇದಿಕೆ ಸಮಿತಿ ಸಂಚಾಲಕ ರಾಕೇಶ್ ರೈ ಕೆಡೆಂಜಿ, ಸಂಯೋಜನ ಸಮಿತಿಯ ಕುಂಬ್ರ ದುರ್ಗಾಪ್ರಸಾದ್ ರೈ, ಶ್ರೀಧರ್ ರೈ ಎಚ್., ಸಾಮಗ್ರಿ ಹಂಚಿಕೆ ಸಮಿತಿಯ ಲೋಕೇಶ್ ಹೆಗ್ಡೆ, ಕ್ರೀಡಾ ಸಮಿತಿಯ ಪದ್ಮನಾಭ ಶೆಟ್ಟಿ, ರಾಮಣ್ಣ ರೈ, ಸುವಿಚಾರ ಬಳಗದ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್, ಪ್ರೇಮಲತಾ ರಾವ್, ಹರಿಣಾಕ್ಷಿ ಜೆ. ಶೆಟ್ಟಿ, ಸುದರ್ಶನ್ ನಾೖಕ್ ಕಂಪ ಸವಣೂರು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡೆಂಕಿರಿ, ವಿವೇಕಾನಂದ ಪ.ಪೂ. ಕಾಲೇಜಿನ ಪ್ರಾಚಾರ್ಯೆ ಹರಿಣಿ ಪುತ್ತೂರಾಯ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಚಾರ್ಯ ಸೀತಾರಾಮ ಕೇವಳ, ಅಬ್ರಾಹಂ ವರ್ಗೀಸ್, ಯಕ್ಷಗಾನ ಕಲಾವಿದ ದಾಸಪ್ಪ ರೈ, ಸಾಂದೀಪನಿ ವಿದ್ಯಾಸಂಸ್ಥೆಯ ಜಯಮಾಲ ವಿ.ಎನ್., ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸಲಹೆ, ಸೂಚನೆ ನೀಡಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಸ್ವಾಗತಿಸಿ, ಸ್ವಾಗತ ಸಮಿತಿ ಕೋಶಾಧಿಕಾರಿ ರಾಮಣ್ಣ ಗೌಡ ಗುಂಡೋಳೆ ವಂದಿಸಿದರು.
Advertisement
ಪ್ರಾಚ್ಯ ವಸ್ತುಗಳ ಪ್ರದರ್ಶನ ಪುಸ್ತಕ ಪ್ರದರ್ಶನ- ಮಾರಾಟ, ತುಳುನಾಡಿನ ಬದುಕು ಮತ್ತು ಸಂಸ್ಕೃತಿ ಬಿಂಬಿಸುವ ಹಳೆ ವಸ್ತುಗಳ ಪ್ರದರ್ಶನವೂ ಇರಲಿದೆ. ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಸಮ್ಮಾನಿಸಲಾಗುವುದು. ಜತೆಗೆ ಕವಿಗೋಷ್ಠಿ, ಚಾವಡಿ ಪಟ್ಟಾಂಗ, ತುಳು ತಾಳಮದ್ದಳೆ ನಡೆಯಲಿವೆ. ಜನಪದ ಗೊಬ್ಬುಲು
ಸಮ್ಮೇಳನದ ಅಂಗವಾಗಿ ನಡೆಯುವ ಕ್ರೀಡಾಕೂಟದಲ್ಲಿ ಇತರ ಕ್ರೀಡಾ ಪ್ರಾಧಿಕಾರಗಳಿಂದ ಭಿನ್ನವಾಗಿರುವ ತುಳು ನಾಡಿನ ‘ತುಳುವೆರೆ ಗೊಬ್ಬುಗಳಾದ ಲಗೋರಿ, ಕೊತ್ತಲಿಗೆ ಕ್ರಿಕೆಟ್, ಚೆನ್ನೆಮಣೆ ಆಟ, ಹಗ್ಗಜಗ್ಗಾಟ, ಹಾಳೆ ಎಳೆಯುವ ಆಟ, ಟೋಪಿ ಆಟಗಳು ನಡೆಯಲಿವೆ. ತುಳುವರ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಮ್ಮೇಳನದಲ್ಲಿ ‘ತುಳುವೆರೆ ಗೊಬ್ಬುಲು’ ಎಂಬ ಪರಿಕಲ್ಪನೆಯನ್ನು ಪರಿಚಯಿಸುವ ಪ್ರಯತ್ನ ತುಳು ಸಮ್ಮೇಳನದ್ದು.