Advertisement

ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾರಿಗೆ ಒಲಿಯಿತು ಸಾಹಿತ್ಯ ಕ್ಷೇತ್ರದ ನೊಬೆಲ್

05:40 PM Oct 07, 2021 | Team Udayavani |

ಸ್ಟಾಕ್‌ಹೋಮ್‌ : 2021 ನೇ ಸಾಲಿನ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ನೊಬೆಲ್ ಪ್ರಶಸ್ತಿಯನ್ನು ತಾಂಜಾನಿಯಾ ಮೂಲದ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾ ಅವರಿಗೆ ನೀಡಲಾಗಿದೆ.

Advertisement

ನೊಬೆಲ್‌ ಸಮಿತಿಯು ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ಗುರುವಾರ  ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದು, 10 ಮಿಲಿಯನ್ ಸ್ವೀಡಿಷ್ ಕ್ರೌನ್( $1.14 ಡಾಲರ್) ಬಹುಮಾನವನ್ನು ನೀಡಲಾಗುತ್ತಿದೆ.

72 ರ ಹರೆಯದ  ಅಬ್ದುಲ್ ರಜಾಕ್ ಗುರ್ನಾ ಅವರು ಪ್ರಸಕ್ತ ಲಂಡನ್ ನಲ್ಲಿ ನೆಲೆಸಿದ್ದು , ವಸಾಹತುಶಾಹಿಯ ಪರಿಣಾಮಗಳು, ಖಂಡಗಳ ನಡುವಿನ ಸಂಸ್ಕೃತಿಗಳು,ಕೊಲ್ಲಿಯಲ್ಲಿ ನಿರಾಶ್ರಿತರ ಭವಿಷ್ಯದ ಬಗ್ಗೆ ಅವರ  ಬರೆಯುವಿಕೆಗಾಗಿ ಪ್ರಶಸ್ತಿ ನೀಡಲಾಗಿದೆ.

ಗುರ್ನಾ ಅವರು ಪ್ಯಾರಡೈಸ್,ದಿಸರ್ಷನ್,ಬೈ ದಿ ಸೀ ಸೇರಿದಂತೆ ಹಲವು ಕಾದಂಬರಿಗಳನ್ನು ಬರೆದಿದ್ದಾರೆ.ಎ ಕಂಪ್ಯಾನಿಯನ್ ಟು ಸಲ್ಮಾನ್ ರಶ್ದಿ ಪುಸ್ತಕದ ಸಂಪಾದಕರಾಗಿ ಕೆಲಸ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next