ಟೋಕಿಯೊ: ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಸಿಂಗಲ್ಸ್ ನಲ್ಲಿ ಯಾವುದೇ ಪದಕವಿಲ್ಲದೆ ಟೋಕಿಯೊ ಒಲಿಂಪಿಕ್ಸ್ ಪಯಣವನ್ನು ಅಂತ್ಯಗೊಳಿಸಬೇಕಾಗಿದೆ. ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲೂ ನೊವಾಕ್ ಸೋಲನುಭವಿಸಿದರು.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪ್ಯಾಬ್ಲೋ ಬಸ್ಟಾ ವಿರುದ್ಧ ನೊವಾಕ್ ಜೊಕೊವಿಕ್ 4-6, 7-6, 3-6 ಸೆಟ್ ಅಂತದರದಲ್ಲಿ ಸೋಲನುಭವಿಸಿದರು. ಸೆಮಿ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಸೋಲನುಭವಿಸಿದ್ದರು.
ಇದನ್ನೂ ಓದಿ:Free Fire ಗೇಮ್ ಚಟ; ಹಣ ಕಳೆದುಕೊಂಡ 13 ವರ್ಷದ ಬಾಲಕ ನೇಣಿಗೆ ಶರಣು
2008 ರ ಬೀಜಿಂಗ್ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್‌ನಲ್ಲಿ ಜೊಕೊವಿಕ್ ಕಂಚಿನ ಪದಕವನ್ನು ಗೆದ್ದಿದ್ದರು. 20 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್ ಹೊಂದಿರುವ ಏಕೈಕ ಒಲಿಂಪಿಕ್ ಪದಕ ಇದಾಗಿದೆ.
2021ರ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಪ್ರಶಸ್ತಿ ಎತ್ತಿರುವ ಜೊಕೋವಿಕ್, ಒಲಿಂಪಿಕ್ಸ್ ಹಾಗೂ ಯುಎಸ್ ಓಪನ್‌ನಲ್ಲೂ ಚಾಂಪಿಯನ್ ಆಗಿ ಮೂಡಿಬಂದದಿದ್ದರೆ ಗೋಲ್ಡನ್ ಸ್ಲಾಮ್ ಹಿರಿಮೆಗೆ ಪಾತ್ರರಾಗುತ್ತಿದ್ದರು. 1988ರಲ್ಲಿ ಸ್ಟೆಫಿ ಗ್ರಾಫ್ ಇಂಥದೊಂದು ಅಮೋಘ ಸಾಧನೆಗೈದಿದ್ದರು. ಪುರುಷರ ವಿಭಾಗದಲ್ಲಿ ಯಾರೂ ಈ ಎತ್ತರ ತಲುಪಿಲ್ಲ.