Advertisement
ಕಳೆದ ಸಲದ ಥ್ರಿಲ್ಲಿಂಗ್ ಫೈನಲ್‌ನಲ್ಲಿ ನಂಬರ್ ವನ್ ಆಟಗಾರನಾಗಿದ್ದ ಜೊಕೋವಿಕ್ ಬ್ರಿಟನ್ನಿನ ಆ್ಯಂಡಿ ಮರ್ರೆ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಇದರ ಹಿಂದಿನ ವರ್ಷ ರಫೆಲ್ ನಡಾಲ್ ಅವರನ್ನು ಮಣಿಸಿದ್ದರು. ಬಳಿಕ 6ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನೂ ಎತ್ತಿದ್ದರು.
ಜೊಕೋವಿಕ್ ಹಿಂದೆ ಸರಿದುದರಿಂದ ಅವರ ನಂಬರ್ ವನ್ ಶ್ರೇಯಾಂಕವನ್ನು ವಿಶ್ವದ ನಂ.5 ಟೆನಿಸಿಗ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರಿಗೆ ಲಭಿಸಿದೆ. ಆದರೆ ಶುಕ್ರವಾರವಷ್ಟೇ ಮುಗಿದ “ಮುಬಾದಲ ವರ್ಲ್ಡ್ ಟೆನಿಸ್ ಚಾಂಪಿಯನ್‌ಶಿಪ್’ ಫೈನಲ್‌ನಲ್ಲಿ ಅವರು ಕೆವಿನ್ ಆ್ಯಂಡರ್ಸನ್‌ಗೆ ಶರಣಾಗಿದ್ದರು. ಮೊದಲ ಸುತ್ತಿನ ಪಂದ್ಯದಲ್ಲಿ ಥೀಮ್ ರಶ್ಯದ ಎವೆYನಿ ಡಾನ್‌ಸ್ಕಾಯ್ ವಿರುದ್ಧ ಆಡಲಿದ್ದಾರೆ. ನಂ.2 ಶ್ರೇಯಾಂಕಿತ ಪಾಬ್ಲೊ ಕರೆನೊ ಬುಸ್ಟ ಕ್ರೊವೇಶಿಯಾದ ಬೋರ್ನ ಕೊರಿಕ್ ವಿರುದ್ಧ ಸೆಣಸುವರು. ಜೆಕೋಸ್ಲೊವಾಕಿಯಾದ 32ರ ಹರೆಯದ ಹಿರಿಯ ಆಟಗಾರ ಥಾಮಸ್ ಬೆರ್ಡಿಶ್, ಸ್ಪೇನಿನ ಆಲ್ಬರ್ಟ್ ರಮೋಸ್ ವಿನೋಲಸ್, ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ, ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಕತಾರ್ ಓಪನ್‌ನಲ್ಲಿ ಆಡುವ ಪ್ರಮುಖ ಆಟಗಾರರು. ಬೆರ್ಡಿಶ್ ಕಳೆದೆರಡೂ ವರ್ಷ ಸೆಮಿಫೈನಲ್‌ನಲ್ಲಿ ಎಡವಿದ್ದರು. ವೆರ್ದಸ್ಕೊ ಕೂಡ ಕಳೆದ ವರ್ಷ ಸೆಮಿಫೈನಲ್ ತನಕ ಸಾಗಿಬಂದಿದ್ದು, ಅಲ್ಲಿ ಜೊಕೋವಿಕ್‌ಗೆ ಶರಣಾಗಿದ್ದರು. ಆ್ಯಂಡಿ ಮರ್ರೆ, ರಫೆಲ್ ನಡಾಲ್ ಕೂಡ ಗಾಯಾಳಾಗಿ ಹಿಂದೆ ಸರಿದಿರುವುದರಿಂದ ದೋಹಾದಲ್ಲಿ ಯುವ ಆಟಗಾರರಿಗೆ ಮಿಂಚುವ ಅವಕಾಶವೊಂದು ಒದಗಿ ಬಂದಿದೆ.