Advertisement

ಕದನ ಕಣದಲ್ಲಿ ಟೆನಿಸ್‌ ಸೇನಾನಿ! ಉಕ್ರೇನಿಯನ್‌ ಟೆನಿಸಿಗನ ನೆರವಿಗೆ ಜೊಕೋವಿಕ್‌

11:12 PM Mar 07, 2022 | Team Udayavani |

ಸರ್ಬಿಯಾ: ಉಕ್ರೇನಿನ ಮಾಜಿ ಟೆನಿಸಿಗ, ವಿಶ್ವದ ಮಾಜಿ ನಂ. 31ನೇ ಆಟಗಾರ  ಸ್ಟಾಖೋವ್‌ಸ್ಕಿ ನೆರವಿಗೆ ನೊವಾಕ್‌ ಜೊಕೋವಿಕ್‌ ಮುಂದಾಗಿದ್ದಾರೆ. ಅವರಿಗೆ ಆರ್ಥಿಕ ನೆರವಿನ ಜತೆಗೆ ಯಾವುದೇ ರೀತಿಯ ಸಹಾಯಕ್ಕೂ ತಾನು ಸಿದ್ಧ ಎಂಬುದಾಗಿ ಜೊಕೋ ತಿಳಿಸಿದ್ದಾರೆ.

Advertisement

ಸ್ಟಾಖೋವ್‌ಸ್ಕಿ ಪ್ರಸ್ತುತ ಉಕ್ರೇನಿನ ಮೀಸಲು ಸೇನಾಪಡೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ರಷ್ಯಾ ವಿರುದ್ಧದ ಕದನದ ವೇಳೆ ಸ್ಟಾಖೋವ್‌ಸ್ಕಿ ಸ್ಥಿತಿ ಏನಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೂ ಮಿಗಿಲಾಗಿ ಅವರಿಗೆ ಸೇನೆಯಲ್ಲಿ ಯಾವುದೇ ಅನುಭವ ಇಲ್ಲ. ಕಳೆದ ತಿಂಗಳಷ್ಟೇ ದೇಶದ ಮೀಸಲು ಸೇನೆಗೆ ಸೇರ್ಪಡೆಗೊಂಡಿದ್ದರು!

36 ವರ್ಷದ ಸಬೇìಯಿ ಸ್ಟಾಖೋವ್‌ಸ್ಕಿ 4 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಸಾಧಕ. 2013ರ ವಿಂಬಲ್ಡನ್‌ನ ದ್ವಿತೀಯ ಸುತ್ತಿನಲ್ಲೇ ರೋಜರ್‌ ಫೆಡರರ್‌ ಅವರನ್ನು ಸೋಲಿಸಿ ಸುದ್ದಿಯಾಗಿದ್ದರು.

ನಿಖರ ವಿಳಾಸ ತಿಳಿಸಿ…
ಪ್ರಸ್ತುತ ಸ್ಟಾಖೋವ್‌ಸ್ಕಿ ತಮ್ಮ ಹಾಗೂ ಜೊಕೋವಿಕ್‌ ನಡುವೆ ನಡೆದ ಸಂಭಾಷಣೆಯ ಸ್ಕ್ರೀನ್‌ಶಾಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಿಮಗೆ ನೆರವು ಒದಗಿಸಲು ದಯವಿಟ್ಟು ನಿಖರವಾದ ವಿಳಾಸವನ್ನು ತಿಳಿಸಿ. ಆರ್ಥಿಕ ನೆರವು, ಇನ್ಯಾವುದೇ ರೀತಿಯ ಸಹಾಯವನ್ನು ಮಾಡಲು ನಾನು ಸಿದ್ಧ’ ಎಂದಿದ್ದಾರೆ ಜೊಕೋವಿಕ್‌.

Advertisement

Udayavani is now on Telegram. Click here to join our channel and stay updated with the latest news.

Next