Advertisement

ಪ್ರೇಕ್ಷಕರಿಲ್ಲದಿದ್ದರೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದಿಲ್ಲ: ಜೊಕೋವಿಕ್‌

12:51 AM May 29, 2021 | Team Udayavani |

ಬೆಲ್‌ಗ್ರೇಡ್ (ಸರ್ಬಿಯಾ): ಕೊರೊನಾ ಹಾವಳಿಯಿಂದ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಪ್ರೇಕ್ಷಕರ ಗೈರಲ್ಲಿ ಆಯೋಜಿಸಲು ಸಂಘಟಕರು ಚಿಂತನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್‌ ಆಟಗಾರ ನೊವಾಕ್‌ ಜೊಕೋವಿಕ್‌, ಒಂದು ವೇಳೆ ಪ್ರೇಕ್ಷಕರನ್ನು ಕ್ರೀಡಾಕೂಟಕ್ಕೆ ನಿಷೇಧಿಸಿದರೆ ತಾನು ಕೂಡ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೊಕೋ, “ಪ್ರೇಕ್ಷಕರಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಿದರಷ್ಟೇ ನಾನು ಒಲಿಂಪಿಕ್ಸ್‌ನಲ್ಲಿ
ಆಡಲು ಬಯಸುತ್ತೇನೆ. ಇಲ್ಲದಿದ್ದರೆ ಹಿಂದೆ ಸರಿಯತ್ತೇನೆ’ ಎಂದಿದ್ದಾರೆ. ಜೊಕೋವಿಕ್‌ಗೂ ಮುನ್ನ ರಫೆಲ್‌ ನಡಾಲ್‌, ಸೆರೆನಾ ವಿಲಿಯಮ್ಸ್‌, ರೋಜರ್‌ ಫೆಡರರ್‌ ಕೂಡ ಇಂಥದೇ ನಿರ್ಧಾರವನ್ನು ಪ್ರಕಟಿಸಿದ್ದರು. “ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್‌ ನಂಥ ಕ್ರೀಡಾಕೂಟದಲ್ಲಿ ಆಡುವುದು ಬಹಳ ಕಷ್ಟ. ಆದ್ದರಿಂದ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳುವ ಬಗ್ಗೆ ಎರಡು ಮನಸ್ಸಿದೆ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next