Advertisement

ನ. 16 – 20: ಉಡುಪಿಯಲ್ಲಿ ಬೃಹತ್‌ ಯೋಗ ಶಿಬಿರ

11:20 PM Nov 04, 2019 | Team Udayavani |

ಉಡುಪಿ: ಯೋಗ ಗುರು ಬಾಬಾ ರಾಮ್‌ ದೇವ್‌ ನೇತೃತ್ವದಲ್ಲಿ ನ. 16ರಿಂದ 20ರ ವರೆಗೆ ಶ್ರೀಕೃಷ್ಣ ಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ನಡೆಯಲಿರುವ ಬೃಹತ್‌ ಉಚಿತ ಯೋಗ ಶಿಬಿರದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರ ಲಾಲ್‌ಜಿ ಆರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

30,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಬಾಬಾ ರಾಮ್‌ದೇವ್‌ ಅವರೇ ತರಬೇತಿ ನೀಡಲಿದ್ದಾರೆ.ಯೋಗ ಶಿಕ್ಷಕರು ಕನ್ನಡದಲ್ಲಿ ಪೂರಕ ಮಾಹಿತಿ ನೀಡಲಿದ್ದಾರೆ.

5 ದಿನಗಳ ಶಿಬಿರದಲ್ಲಿ ಭಾಗವಹಿಸುವು ದರಿಂದ ಶಿಬಿರಾರ್ಥಿಗಳು 1ರಿಂದ 5 ಕೆ.ಜಿ. ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು. ರೋಗಿಗಳ ರೋಗಕ್ಕೆ ಅನುಗುಣವಾಗಿ ಸೂಕ್ತ ಯೋಗಾಸನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

101 ಕಡೆಗಳಲ್ಲಿ ಶಿಬಿರ
ಬೃಹತ್‌ ಯೋಗ ಶಿಬಿರದ ಪೂರ್ವಭಾವಿಯಾಗಿ ಜಿಲ್ಲೆಯ 101 ಕಡೆಗಳಲ್ಲಿ 5 ದಿನಗಳ ಉಚಿತ ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ. 75 ಶಿಬಿರಗಳನ್ನು ಪೂರೈಸಲಾಗಿದೆ ಎಂದರು.

ಪತಂಜಲಿ ಯೋಗ ಪೀಠದ ರಾಜ್ಯ ಮಹಿಳಾ ಪ್ರಭಾರಿ ಸುಜಾತಾ, ಪತಂಜಲಿ ಯೋಗ ಪೀಠದ ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಪತಂಜಲಿ ಯೋಗಪೀಠದ ಜಿಲ್ಲಾಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ, ಪ್ರಚಾರ ಸಮಿತಿಯ ಡಾಣ ತನ್ಮಯ ಗೋಸ್ವಾಮಿ, ಪರ್ಯಾಯ ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್‌ ಆಚಾರ್ಯ ಉಪಸ್ಥಿತರಿದ್ದರು.

Advertisement

ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಪತಂಜಲಿ ಯೋಗಪೀಠದ ಜಿಲ್ಲಾಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ, ಪ್ರಚಾರ ಸಮಿತಿಯ ಡಾಣ ತನ್ಮಯ ಗೋಸ್ವಾಮಿ, ಪರ್ಯಾಯ ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್‌ ಆಚಾರ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next