Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನ.8ರಂದು ನಗರದ ಶಂಕರ ಮಠದಲ್ಲಿ ಬೆಳಗ್ಗೆ 10ಗಂಟೆಗೆ ಮಾಲಾಧಾರಣ ಕಾರ್ಯಕ್ರಮ ನಡೆಯಲಿದೆ. 11ರಂದು ದತ್ತ ದೀಪೋತ್ಸವ, 12ರಂದು ಪಡಿ ಸಂಗ್ರಹ, 14ರಂದು ದತ್ತಪೀಠದಲ್ಲಿ ಧರ್ಮಸಭೆ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.
Related Articles
Advertisement
ಜಿಲ್ಲಾಡಳಿತದಿಂದ ಅನುಮತಿ ಪಡೆಯಲ್ಲ: ಗುಹೆಯೊಳಗೆ ಸ್ವಾಮೀಜಿಗಳು ಪ್ರವೇಶಿಸಿ ಪೂಜೆ ಸಲ್ಲಿಸಲು ಇದುವರೆಗೂ ಯಾವುದೇ ನಿರ್ಬಂಧವಿರಲಿಲ್ಲ. ಹೈಕೋರ್ಟ್ ತೀರ್ಪು ಬಂದ ಬಳಿಕ ಗುಹೆಯೊಳಗೆ ಸ್ವಾಮೀಜಿಗಳು ಪ್ರವೇಶಿಸಲು ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಈ ಹಿಂದೆ ಇಲ್ಲದ ನಿರ್ಬಂಧ ಈಗ್ಯಾಕೆ? ಈ ಬಗ್ಗೆ ಇತ್ತೀಚೆಗೆ ಗುಹೆ ಪ್ರದೇಶದಲ್ಲೇ ಪ್ರತಿಭಟನೆ ನಡೆಸಿದ್ದೆವು. ದತ್ತಮಾಲೆ ಅಭಿಯಾನದ ಸಂದರ್ಭದಲ್ಲಿ ಸ್ವಾಮೀಜಿಯವರ ಗುಹೆ ಪ್ರವೇಶಕ್ಕೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಲು ವಿನಂತಿಸುವುದಿಲ್ಲ ಎಂದರು.
ಸರ್ಕಾರ ಸಮಿತಿ ರಚಿಸಿದ್ದು ಖಂಡನೀಯ: ಶ್ರೀ ದತ್ತಾತ್ರೇಯ ಬಾಬಾಬುಡನ್ ದರ್ಗಾ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಸರ್ಕಾರ ಆಕ್ಷೇಪಣೆ ಸಲ್ಲಿಸಲು ಸಮಿತಿ ರಚಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಕೋರ್ಟ್ ಆದೇಶದಂತೆ ಶೀಘ್ರವೇ ನಿರ್ಣಯ ಕೈಗೊಂಡು ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿದರು.