Advertisement
ದುಬೆ ತಿಂಗಳಿಗೆ ಕೋಟಿ ರೂ.ಆದಾಯ ಗಳಿಸುತ್ತಿದ್ದನು ಎಂದು ತಿಳಿದು ಬಂದಿದ್ದು, ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾನೆ, ಹೇಗೆ ವ್ಯಯಿಸಿದ್ದಾನೆ ಎಂಬುದನ್ನು ಇ.ಡಿ. ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
Related Articles
Advertisement
ಪೊಲೀಸರನ್ನು ಭೀಕರವಾಗಿ ಹತ್ಯೆಗೈದಿದ್ದ ದುಬೆ ಗ್ಯಾಂಗ್ಡಿವೈಎಸ್ಪಿ ಸೇರಿದಂತೆ 8 ಪೊಲೀಸರನ್ನು ವಿಕಾಸ್ ದುಬೆ ಹಾಗೂ ಆತನ ಸಹಚರರು ಭೀಕರವಾಗಿ ಹತ್ಯೆಗೈದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಕೊಲೆಗೈದ ಬಳಿಕ ಪೊಲೀಸರನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಪ್ರತಿಕಾರ ತೀರಿಸಿಕೊಂಡಿದ್ದಾರೆ. ಡಿವೈಎಸ್ಪಿ ದೇವೇಂದ್ರ ಮಿಶ್ರಾ ಮೇಲೆ 4 ಬಾರಿ ಗುಂಡು ಹಾರಿಸಲಾಗಿದೆ. ಒಂದು ಗುಂಡು ತಲೆಗೆ, ಮತ್ತೊಂದು ಬುಲೆಟ್ ಎದೆಗೆ ಹಾಗೂ ಎರಡು ಗುಂಡುಗಳು ಹೊಟ್ಟೆಗೆ ಹಾರಿಸಲಾಗಿದೆ. ಬಳಿಕ ಅವರ ಕಾಲನ್ನು ಕಡಿದಿದ್ದಾರೆ. ಮೂವರು ಪೊಲೀಸರ ತಲೆ ಹಾಗೂ ಮುಖಕ್ಕೆ ತೀರ ಹತ್ತಿರದಿಂದ ಗುಂಡು ಹಾರಿಸಿ ರು ವುದು ತಿಳಿದು ಬಂದಿದೆ. ಜು.2ರಂದು ಕಾನ್ಪುರದ ಬಿಕ್ರು ಹಳ್ಳಿಯಲ್ಲಿ ಎಂಟು ಪೊಲೀಸರನ್ನು ದುಬೆ ಗ್ಯಾಂಗ್ ಹತ್ಯೆಗೈದಿತ್ತು. ಮತ್ತೊಬ್ಬ ಸಹಚರ ಸೆರೆ, 2 ರೈಫಲ್ ವಶ
ಉತ್ತರ ಪ್ರದೇಶದಲ್ಲಿ ರೌಡಿ ವಿಕಾಸ್ ದುಬೆಯ ಮತ್ತೊಬ್ಬ ಸಹಚರ ಸೆರೆ ಸಿಕ್ಕಿದ್ದಾನೆ. ಚೌಬೆಪುರ ಬಳಿ ಸೋಮವಾರ ಮಧ್ಯ ರಾತ್ರಿ ರೌಡಿ ಶಶಿಕಾಂತ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಲೂಟಿ ಮಾಡಿದ್ದ 2 ರೈಫಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ 21 ಮಂದಿ ಆರೋಪಿಗಳಾಗಿದ್ದು, ಈ ಪೈಕಿ ನಾಲ್ವರನ್ನು ಬಂಧಿಸಲಾಗಿದೆ. 6 ಮಂದಿ ಎನ್ ಕೌಂಟರ್‌ನಲ್ಲಿ ಹತರಾಗಿದ್ದಾರೆ. 11 ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.