Advertisement

ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌ ಮ್ಯಾನ್‌ಸನ್‌ ಇನಿಲ್ಲ

04:41 PM Nov 20, 2017 | udayavani editorial |

ವಾಷಿಂಗ್ಟನ್‌ : ತನ್ನ ಯುವ ಹಿಂಬಾಲಕರನ್ನು ಮುಂದಿಟ್ಟುಕೊಂಡು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1960ರ ದಶಕದ ಕೊನೆಯಲ್ಲಿ ಸರಣಿ ಹತ್ಯೆಗಳನ್ನು ನಡೆಸಿ ಜನ ಸಮೂಹದಲ್ಲಿದ್ದ ಶಾಂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ಹೊಸಕಿ ಹಾಕಿ ಜನರ ನಿದ್ದೆಗೆಡಿಸಿದ್ದ ಕ್ರೂರ ಕಂಗಳ ಕುಖ್ಯಾತ ಸರಣಿ ಹಂತಕ, ಕಲ್ಟ್ ಲೀಡರ್‌,  ಚಾರ್ಲ್ಸ್‌ ಮ್ಯಾನ್‌ಸನ್‌ ತನ್ನ 83ರ ಹರೆಯದಲ್ಲಿ ಮೃತಪಟ್ಟನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಾರ್ಧಕ್ಯ ಸಹಜ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಮ್ಯಾನ್‌ಸನ್‌ ನಿನ್ನೆ ಭಾನುವಾರ ಸಂಜೆ ಕರ್ನ್ ಕೌಂಟಿ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಕ್ಯಾಲಿಫೋರ್ನಿಯದ ಅಪರಾಧಿಗಳ ಸುಧಾರಣಾ ಮತ್ತು ಪುನರ್‌ವಸತಿ ಇಲಾಖೆ ತಿಳಿಸಿದೆ. ಆದರೆ ಮ್ಯಾನ್‌ಸನ್‌ ಸಾವಿನ ಸನ್ನಿವೇಶಗಳ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.

ಮ್ಯಾನ್‌ಸನ್‌ ಸಮೀಪದ ಕಾರ್ಕೋರಾನ್‌ ರಾಜ್ಯ ಬಂಧೀಖಾನೆಯಲ್ಲಿ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ. ನಟಿ ಶ್ಯಾರನ್‌ ಟೇಟ್‌ ಸೇರಿದಂತೆ 9 ಮಂದಿಯನ್ನು ನಿಷ್ಕರುಣೆಯಿಂದ ಕೊಲೆಗೈದ ಅಪರಾಧವನ್ನು ಆತ ಎಸಗಿದ್ದ. 

1969ರ ವೈಶಾಖದಲ್ಲಿ ಮ್ಯಾನ್‌ಸನ್‌ ಸರಣಿ ಹತ್ಯೆ ನಡೆಸಿ ಜನಮನದಲ್ಲಿ ಪ್ರಾಣ ಭೀತಿಯನ್ನು ಸೃಷ್ಟಿಸಿ ಎಲ್ಲರಿಗೂ ಯಮಸ್ವರೂಪಿಯಾಗಿದ್ದ.ಇಂದಿಗೂ ಆತನ ಹೆಸರು ನಿರ್ದಯ ಹತ್ಯೆಯ ಪ್ರತೀಕವಾಗಿ ಜನಮಾನಸದಲ್ಲಿ ಭೀತಿಯ ಕರಾಳ ಛಾಯೆಯನ್ನು ಶಾಶ್ವತವಾಗಿ ಉಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next