Advertisement

ಕಾಂಗ್ರೆಸ್‌ನಿಂದ ಸಿಲಿಕಾನ್‌ ಸಿಟಿಗೆ ಕುಖ್ಯಾತಿ

12:21 PM Apr 22, 2018 | Team Udayavani |

ಬೆಂಗಳೂರು/ಮಹದೇವಪುರ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಬದಲಿಸಿ, ಬಿಜೆಪಿ ಬೆಂಬಲಿಸುವಂತೆ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಮನವಿ ಮಾಡಿದರು.

Advertisement

ಮಾರತ್ತಹಳ್ಳಿಯಲ್ಲಿ ಶನಿವಾರ ನಡೆದ ಬಿಜೆಪಿ ನಾಯಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆರೆಗಳ ನಗರಿ, ಉದ್ಯಾನ ನಗರಿಯಾಗಿದ್ದ ಸಿಲಿಕಾನ್‌ ಸಿಟಿ ಬೆಂಗಳೂರು, ಕಳೆದ ಐದು ವರ್ಷಗಳಿಂದ  ಕ್ರೆ„ಮ್‌ ನಗರಿ, ಬೆಂಕಿ ಕೆರೆಗಳ ನಗರಿ ಎಂಬ ಕುಖ್ಯಾತಿಗೆ ಗುರಿಯಾಗಿದೆ.

ಸಿದ್ದರಾಮಯ್ಯ ಸರ್ಕಾರದ ದುರಾಡಳಿತದಿಂದ ರಸ್ತೆಗಳು ಗುಂಡಿಮಯವಾಗಿದ್ದು, 12 ಮಂದಿ ಗುಂಡಿಗೆ ಬಿದ್ದು ಬಲಿಯಾಗಿರುವುದು ದುರದೃಷ್ಟಕರ. ಹಾಗಾಗಿ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಬದಲಿಸಿ ಬಿಜೆಪಿಯನ್ನು ಬೆಂಬಲಿಸಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ಕರೆ ನೀಡಿದರು.

ಲೋಕಸಭೆ ಚುನಾವಣೆ ಬಳಿಕ ದೇಶಾದ್ಯಂತ ಬಿಜೆಪಿ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದ ದಿಕ್ಕು ತೋಚದಂತಾಗಿರುವ ಕಾಂಗ್ರೆಸಿಗರು ಮತಯಂತ್ರ ದೋಷಪೂರಿತವಾಗಿದೆ ಎಂದು ದೂರಿದ್ದರು. ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಚಮತ್ಕಾರದ ಗೆಲುವಿಗೆ ನಿಷ್ಠಾವಂತ ಕಾರ್ಯಕರ್ತರು ಕಾರಣ.

ಪೇಜ್‌ ಪ್ರಮುಖರು ತಮ್ಮ ಸೀಮಿತ 50 ಮತದಾರರಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ವ್ಯತ್ಯಾಸಗಳ ಅರಿವು ಮೂಡಿಸಿ, ಕರ್ನಾಟಕದಲ್ಲೂ ಪಕ್ಷ ಬಹುಮತ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಿಳಿಸಿದರು.

Advertisement

ನಂತರ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಜನರಿಂದ ಸಂಗ್ರಹಿಸಿರುವ ಅಭಿಪ್ರಾಯಗಳೇ ಬಿಜೆಪಿಯ ಪ್ರಣಾಳಿಕೆಯಾಗಿದ್ದು, ಮಹದೇವಪುರ ಕ್ಷೇತ್ರಕ್ಕೆ ಬಾಕಿಯಿರುವ ಕೆಲಸಗಳು, ರಾಜ್ಯಕ್ಕೆ ಅಗತ್ಯವಿರುವ ಕೆಲಸಗಳಿಗೆ ಸಂಬಂಧಿಸಿದಂತೆ ಜನರಿಂದ ಸಂಗ್ರಹಿಸಿದ ಅಭಿಪ್ರಾಯಗಳೊಂದಿಗೆ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಮಹದೇವಪುರ ಕ್ಷೇತ್ರಕ್ಕೆ 1300 ಕೋಟಿ ರೂ. ಅನುದಾನ ನೀಡಿದೆ.

ಆದರೆ, ಕಾಂಗ್ರೆಸ್‌ ಸರ್ಕಾರ 730 ಕೋಟಿ ರೂ. ನೀಡುವ ಮೂಲಕ ಜನರ ನಿರೀಕ್ಷೆ ಹುಸಿಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಬಿಡುಗಡೆ ಮಾಡಿದ ಅನುದಾನ ಹಾಗೂ ಕೈಗೊಂಡ ಕಾಮಗಾರಿಗಳ ವಿವರವುಳ್ಳ ಕೈಪಿಡಿ ಮುದ್ರಿಸಿದ್ದು, ಜನರಿಗೆ ನೀಡಲಾಗುವುದು. ಪಾರದರ್ಶಕ ಆಡಳಿತ ನಮ್ಮ ಕನಸು. ಕ್ಷೇತ್ರದ ಮತದಾರರು ಜನ ಎರಡು ಬಾರಿ ಆಯ್ಕೆ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ಪಾಲಿಕೆ ಸದಸ್ಯರಾದ ಎಸ್‌.ಮುನಿಸ್ವಾಮಿ, ಪುಷ್ಪಾ ಮಂಜುನಾಥ್‌, ಆಶಾ ಸುರೇಶ್‌, ಶ್ವೇತಾ ವಿಜಯ್‌ ಕುಮಾರ್‌, ಮುಖಂಡರಾದ ಜಯಚಂದ್ರ ರೆಡ್ಡಿ, ಮಹೇಂದ್ರ ಮೋದಿ, ಚನ್ನಸಂದ್ರ ಚಂದ್ರಶೇಖರ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next