Advertisement

ಅಕ್ರಮ ಚಟುವಟಿಕೆ ಪೊಲೀಸರಿಗೆ ತಿಳಿಸಿ: ಹಳ್ಳೂರ್‌

12:56 PM Apr 23, 2022 | Team Udayavani |

ಶಹಾಬಾದ: ಗ್ರಾಮದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೇ ಪೊಲೀಸರಿಗೆ ಕರೆ ಮಾಡಿ ತಿಳಿಸಿ ಎಂದು ನಗರ ಪೊಲೀಸ್‌ ಠಾಣೆ ಪಿಐ ಸಂತೋಷ ಹಳ್ಳೂರ್‌ ಹೇಳಿದರು.

Advertisement

ತಾಲೂಕಿನ ತೊನಸನಹಳ್ಳಿ (ಎಸ್‌) ಗ್ರಾಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ನಿರ್ದೇಶನದಂತೆ ಆಯೋಜಿಸಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌’ ಗ್ರಾಮಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆ ಸಮಾಜದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಯಲು ಶ್ರಮಿಸುತ್ತ ಬಂದಿದೆ. ಮಟ್ಕಾ, ಜೂಜಾಟ ಸೇರಿದಂತೆ ಸಮಾಜ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೇ ಇಲಾಖೆಗೆ ತಿಳಿಸಿ. ತಕ್ಷಣವೇ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪೊಲೀಸರ ಬಗ್ಗೆ ಭಯ ಬೇಡ. ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡುವುದರೊಂದಿಗೆ ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಲು ಇಲಾಖೆ ಶ್ರಮಿಸಲು ಮುಂದಾಗಿದೆ. ಸಂಕಷ್ಟದಲ್ಲಿರುವ, ನೊಂದ ಜನರಿಗೆ ಪೊಲೀಸ್‌ ಇಲಾಖೆ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಹೇಳಿಕೊಳ್ಳಬಹುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಹಿತಕರ ಘಟನೆಯಾಗುವ ಚಿತ್ರ ಹಾಗೂ ಬರಹಗಳನ್ನು ಹಾಕಬೇಡಿ. ಗ್ರಾಮದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೇ ಧೈರ್ಯದಿಂದ ತಿಳಿಸಿ. ನಾವು ಮಟ್ಟ ಹಾಕುತ್ತೇವೆ. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ. ಅಲ್ಲದೇ ಏನೇ ಸಮಸ್ಯೆ ಇದ್ದರೂ 112ಕ್ಕೆ ಕರೆ ಮಾಡಿ ಇಲ್ಲವೇ ಬೀಟ್‌ ಪೊಲೀಸರಿಗೆ ತಿಳಿಸಿ ಎಂದರು.

Advertisement

ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ ಗಂಗಭೋ, ಗ್ರಾಪಂ ಸದಸ್ಯರಾದ ಬೆಳ್ಳಪ್ಪ ಕಣದಾಳ, ಸಿದ್ಧು ಸಜ್ಜನಶೆಟ್ಟಿ, ಮುಖಂಡರಾದ ರಾಜಶೇಖರ ಮಾಲಿ ಪಾಟೀಲ, ವೀರೇಶ ಗೊಳೇದ್‌, ಮಹಾಲಿಂಗ ಪೂಜಾರಿ, ಶಿವರಾಯ ಮರತೂರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next