ಕಲಬುರಗಿ: ಚುನಾಯಿತ ಸದಸ್ಯರ ಆಡಳಿತ ಅವಧಿ ಮುಗಿದು ಎರಡು ವರ್ಷಗಳಾದರೂ ಇಲ್ಲಿನ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸದೇ ಮುನ್ನಡೆಸಿಕೊಂಡು ಬರಲಾಗುತ್ತಿದ್ದು, ಈಗ ವಾರ್ಡ್‌ಗಳ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಸೋಮವಾರವಷ್ಟೇ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ವಾರ್ಡ್‌ಗಳ ಕರಡು ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದ್ದಾರೆ. 2011ರ ಜನಗಣತಿ ಆಧಾರದ ಮೇರೆಗೆ ಕಲಬುರಗಿಯ 55 ವಾರ್ಡ್‌ಗಳ ಮೀಸಲಾತಿ ಅಂತಿಮಗೊಳಿಸಲಾಗಿದೆ. ಪಾಲಿಕೆಯ ಒಟ್ಟಾರೆ 55 ವಾರ್ಡ್‌ಗಳಲ್ಲಿ 28 ಸಾಮಾನ್ಯ, 14 ಹಿಂದುಳಿದ ವರ್ಗ, 08 ಪರಿಶಿಷ್ಟ ಜಾತಿ, 01 ಪರಿಶಿಷ್ಟ ಪಂಗಡ ಹಾಗೂ 04 ಬಿಸಿಬಿ ವರ್ಗಕ್ಕೆ ಮೀಸಲಾತಿ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
28 ಸಾಮಾನ್ಯ ವರ್ಗಗಳ ಮೀಸಲಾತಿಯಲ್ಲಿ 14 ಮಹಿಳೆಯರಿಗೆ ಮೀಸಲಾಗಿವೆ. ಅದೇ ರೀತಿ ಏಳು ಹಿಂದುಳಿದ ವರ್ಗ ಮಹಿಳೆಗೆ, 04 ಪರಿಶಿಷ್ಟ ಮಹಿಳೆ ಹಾಗೂ 02 ಬಿಸಿಬಿ ಮಹಿಳೆಗೆ ಮೀಸಲಾಗಿವೆ. ಮೀಸಲಾತಿಯಲ್ಲಿನ ಅನ್ಯಾಯ ಪ್ರಶ್ನಿಸಿ ಹಲವರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಮೀಸಲಾತಿ ಅಂತಿಮಗೊಳ್ಳದೇ ಸಮಯದೂಡುತ್ತಾ ಬರಲಾಗಿದೆ. ಎರಡು ವಾರದ ಹಿಂದೆಯಷ್ಟೇ ನೆರೆಯ ಬೀದರ್ ಸೇರಿದಂತೆ ಇತರ ನಗರಸಭೆಗಳ ಚುನಾವಣೆ ನಡೆದಿದೆಯಾದರೂ ಕಲಬುರಗಿ ಪಾಲಿಕೆಗೆ ಮಾತ್ರ ಚುನಾವಣೆಗೆ ಮುಹೂರ್ತವೇ ಕಾಲ ಕೂಡಿ ಬರುತ್ತಿಲ್ಲ. ವಾರ್ಡ್ ಸಂಪೂರ್ಣ ವಿಂಗಡಣೆ: ಈ ಮೊದಲಿದ್ದ ವಾರ್ಡ್‌ಗಳಾÂವು ಮೊದಲಿನ ಹಾಗೆ ಇಲ್ಲ.
ಒಂದು ವಾರ್ಡ್‌ನಲ್ಲಿ ಮಗದೊಂದು ವಾರ್ಡ್‌ನ ಬಡಾವಣೆಗಳು ಸೇರಿವೆ. ಒಟ್ಟಾರೆ ಒಂದರಿಂದ 55 ವಾರ್ಡ್‌ಗಳು ಸಂಪೂರ್ಣ ವಿಂಗಡಣೆಯಾಗಿವೆ. ಸ್ಪಷ್ಟವಾಗಿ ಹೇಳಬೇಕೆಂದರೆ ಈ ಮೊದಲಿನ ವಾರ್ಡ್ ನಾಲ್ಕು ವಾರ್ಡ್‌ಗಳಲ್ಲಿ ಹರಿದು ಹಂಚಿ ಹೋಗಿದೆ. ಹೀಗಾಗಿ ವಾರ್ಡ್‌ನ ಮೇಲೆ ಹಿಡಿತ ಹೊಂದಿದ್ದ ಅಂದರೆ ಎರಡೂ¾ರು ಸಲ ಪಾಲಿಕೆ ಸದಸ್ಯರಾದವರು ಈಗ ವಾರ್ಡ್ ಇಲ್ಲ ಎನ್ನುವಂತಾಗಿದೆ. ಒಂದಿಬ್ಬರು ಮಾತ್ರ ಮತ್ತೆ ಸ್ಪರ್ಧಿಸಲು ಅವಕಾಶ ಎನ್ನುವಂತಾಗಿದೆ. ಈಗಂತೂ ಕೊರೊನಾ ಅಟ್ಟಹಾಸ ಮೆರೆ ಯುತ್ತಿದೆ. ಹೀಗಾಗಿ ಸದ್ಯಕ್ಕಂತೂ ಚುನಾವಣೆ ನಡೆಯುವುದಿಲ್ಲ.
ಸರ್ಕಾರ ಎಲ್ಲ ಹಂತದ ಚುನಾವಣೆಗಳನ್ನು ಆರು ತಿಂಗಳ ಕಾಲ ಮುಂದೂಡಿದೆ. ಪಾಲಿಕೆ ಏನಿದ್ದರೂ ಚುನಾವಣೆ ನಡೆಯಬೇಕೆಂದರೆ ಆರು ತಿಂಗಳ ನಂತರವಷ್ಟೇ ಅದು ಮೂರನೇ ಹಂತದ ಕೊರೊನಾ ಹಾವಳಿ ವ್ಯಾಪಿಸದಿದ್ದರೆ ಮಾತ್ರ ಎನ್ನಲಾಗಿದೆ.