Advertisement
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಗವಾನ್ ಬುದ್ಧ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಲೆಕ್‌ಪಾರ್ಕ್ ಉದ್ಯಾನವನ ನಾಮಕರಣ ಸಮಾರಂಭದ ಉದ್ಘಾಟನೆ ಹಾಗೂ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಆಪತ್ತು ನಿಧಿಯನ್ನು 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸಮಿತಿ ರಚಿಸಿ ಅದರ ಶಿಫಾರಸಿನ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೀಸಲಾತಿ ಹೆಚ್ಚಳವೆಂಬ ಜೇನುಗೂಡಿಗೆ ಕೈಹಾಕಬೇಡಿ ಎಂದು ನನಗೆ ಬಹಳ ಜನ ಸಲಹೆ ನೀಡಿದ್ದರು. ಆದರೂ ಅವುಗಳನ್ನು ಲೆಕ್ಕಿಸಲಿಲ್ಲ. ಮಾನವೀಯ ಗುಣವಿಲ್ಲದವರು ಎಂದಿಗೂ ಆಡಳಿತ ನಡೆಸಬಾರದು. ಅವರ ಜನಸಂಖ್ಯೆಗೆ ಅನುಗುಣವಾಗಿ ಆ ಜನಾಂಗಗಳಿಗೆ ನ್ಯಾಯ ದೊರಕಿಸುವುದು ನಮ್ಮ ಧರ್ಮ. ಅದರಂತೆ ಈ ಜನಾಂಗಕ್ಕೆ ನ್ಯಾಯ ನೀಡಲು ಸ್ಪಂದಿಸಲೇಬೇಕೆಂಬ ಬಯಕೆಯಿಂದ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದ ಕಾನೂನು ಹೋರಾಟವನ್ನು ನಿಷ್ಟೆ, ಪ್ರಾಮಾಣಿಕತೆಯಿಂದ ಕೈಗೊಳ್ಳುತ್ತೇನೆ. ಸಂವಿಧಾನಾತ್ಮಕವಾದ ಹಕ್ಕು ನೀಡಲು ತಡವೇಕೆ ಮಾಡಬೇಕು. ನಿಮ್ಮ ಬೇಡಿಕೆಗಳೆಲ್ಲವನ್ನೂ ಪೂರೈಸುವತ್ತ ಕ್ರಮ ಕೈಗೊಳ್ಳಲಾಗುವುದು. ಕಾನ್ಶಿರಾಮ್ ನಗರದ ಅಭಿವೃದ್ಧಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು. ನಿಮ್ಮ ಹಕ್ಕನ್ನು ಪಡೆಯಲು ಶಿಕ್ಷಣ ಬಹಳ ಮುಖ್ಯ. ಸಂಘಟನೆಯಲ್ಲಿ ಶಕ್ತಿಯಿದ್ದರೆ, ಪ್ರಜಾಪ್ರಭುತ್ವದಲ್ಲಿ ಬೆಲೆ ಬರುತ್ತದೆ. ನ್ಯಾಯಸಮ್ಮತವಾದ ಹೋರಾಟ ನಡೆಸುವುದು ಸಂವಿಧಾನದ ಹಕ್ಕು. ಬಡವರಿಗೆ ದೀನದಲಿತರ ಒಳಿತಿಗಾಗಿ ಸರ್ಕಾರ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡರೆ, ಕೆಲವರು ಗೊಂದಲ ಸೃಷ್ಟಿಸುತ್ತಾರೆ. ಅಪಸ್ವರಗಳನ್ನು ಆಡುತ್ತಿದ್ದಾರೆ. ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
Related Articles
Advertisement