Advertisement

KAS; 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

12:04 AM Feb 27, 2024 | Team Udayavani |

ಬೆಂಗಳೂರು: ನನೆಗುದಿಗೆ ಬಿದ್ದಿದ್ದ ಗೆಜೆಟೆಡ್‌ ಪ್ರೊಬೆಷನರಿ (ಕೆಎಎಸ್‌) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದ್ದು, 2023-24ನೇ ಸಾಲಿನ ಗ್ರೂಪ್‌ ಎ ಮತ್ತು ಬಿ ವೃಂದದ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

Advertisement

ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು-1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳನ್ವಯ ಗೆಜೆಟೆಡ್‌ ಪ್ರೊಬೇಷನರಿ -2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗ್ರೂಪ್‌ ಎ ಉಳಿಕೆ ಮೂಲ ವೃಂದ (ಆರ್‌ಪಿಸಿ) 123 ಹುದ್ದೆಗಳು, ಹೈದರಾಬಾದ್‌ ಕರ್ನಾಟಕ ವೃಂದದ 36 ಸಹಿತ ಒಟ್ಟು 159, ಗ್ರೂಪ್‌ ಬಿ ವೃಂದದ ಉಳಿಕೆ ಮೂಲ ವೃಂದ (ಆರ್‌ಪಿಸಿ) 184 ಹಾಗೂ ಹೈದರಾಬಾದ್‌ ಕರ್ನಾಟಕ ವೃಂದದ 41 ಸಹಿತ ಒಟ್ಟು 225 ಹುದ್ದೆಗಳು ಒಳಗೊಂಡು ಒಟ್ಟಾರೆ ಎ ಮತ್ತು ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಅರ್ಜಿ ಸಲ್ಲಿಕೆ ಮಾ.4ರಂದು ಆರಂ ಭವಾಗಿ ಎ.3ರಂದು ಕೊನೆ ಯಾಗ ಲಿದೆ. ಅರ್ಜಿ ಸಲ್ಲಿಸುವ ಹಂತಗಳು, ಅರ್ಜಿ ಶುಲ್ಕ, ಮೀಸಲಾತಿ, ವಯೋ ಮಿತಿ ಮತ್ತಿತರ ಮಾಹಿತಿ ಆಯೋಗದ ವೆಬ್‌ಸೈಟ್‌ https://kpsc.kar.nic.in/ ನಲ್ಲಿ ಲಭ್ಯ ವಿದೆ. ತೊಂದರೆ ಎದುರಾದಲ್ಲಿ 080- 30574957/ 30574901 ನಂಬರ್‌ಗೆ ಕರೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next