Advertisement
ಈ ಬೆಳವಣಿಗೆಯ ಮಧ್ಯೆ ನಗರದ ಉದ್ಯಮಿಯೊಬ್ಬರು, ನಾರಾಯಣಗೌಡ ಬಳಿ ಪತ್ತೆಯಾಗಿರುವ ಹಣ ತಮ್ಮದೇ ಎಂದು ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ನೀಡುತ್ತೇವೆ ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಶುಕ್ರವಾರವಷ್ಟೇ ನಾರಾಯಣಗೌಡ ತಂಗಿದ್ದ ನಗರದ ಖಾಸಗಿ ಹೋಟೆಲ್‌ನ ಕೊಠಡಿ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, 1.75 ಕೋಟಿ ರೂ.ಗೂ ಅಧಿಕ ಹಣ ವಶಕ್ಕೆ ತೆಗೆದುಕೊಂಡಿದ್ದರು.
ಐಟಿ ದಾಳಿಗೆ ಒಳಗಾಗಿರುವ ನಾರಾಯಣಗೌಡ ಪಾಟೀಲ್ ರನ್ನು ಅಮಾನತು ಮಾಡಿ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಕೆ. ಲೀಲಾವತಿ ಆದೇಶ ಹೊರಡಿಸಿದ್ದಾರೆ. ಆದರೆ, ಅನಧಿಕೃತವಾಗಿ ಗೈರು ಹಾಜರಾಗಿರುವ ಕಾರಣದಿಂದಾಗಿ ಈ ಶಿಸ್ತು ಕ್ರಮ ತೆಗದುಕೊಳ್ಳಲಾಗಿದೆ. ಕಳೆದ ಎಂಟು ದಿನಗಳಿಂದ ಕಚೇರಿಗೆ ಗೈರು ಹಾಜರಾಗಿರುವ ಕುರಿತು ಪಾಟೀಲಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಅದಕ್ಕೆ ಉತ್ತರಿಸದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಲಾಗಿತ್ತು.