ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮನೆ ಮಹಜರು ನಡೆಸುವ ಸಂದರ್ಭದಲ್ಲಿ ಎ1 ಪವಿತ್ರಾ ಗೌಡ (Pavithra Gowda) ಅವರಿಗೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಮಹಿಳಾ ಪಿಎಸ್ ಐ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ (Renuka Swamy) ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ಜೂ. 15ರಂದು ಪವಿತ್ರಾ ಗೌಡ ಮನೆ ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಹೊರಗಡೆ ಬರುವಾಗ ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡು ಬಂದಿದ್ದರು. ಇದೇ ಲಿಪ್ ಸ್ಟಿಕ್ ವಿಚಾರ ಈಗ ಮಹಿಳಾ ಪಿಎಸ್ ಐಗೆ ಸಂಕಷ್ಟ ತಂದಿಟ್ಟಿದೆ.
ಕರ್ತವ್ಯ ಲೋಪ ಹಿನ್ನಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರಿಂದ ನೋಟಿಸ್ ನೀಡಲಾಗಿದೆ.
ಗೌಡಗೆ ಮೇಕಪ್ ಮಾಡೋಕೆ ಯಾಕೆ ಬಿಟ್ಟಿದ್ದೀರಿ ಎಂದು ಕಾರಣ ಕೇಳಿ ಪಿಎಸ್‌ಐ ಅವರಲ್ಲಿ ಉತ್ತರ ಕೇಳಲಾಗಿದೆ.
ಪವಿತ್ರಾ ಗೌಡ ವಾಶ್ ರೂಮ್ ಗೆ ಹೋದ ಸಂದರ್ಭದಲ್ಲಿ ಅವರು ಅಲ್ಲಿದ್ದ ಮೇಕಪ್ ಸಾಮಾಗ್ರಿಗಳಿಂದ ಮೇಕಪ್ ಮಾಡಿಕೊಂಡು ಬಂದಿದ್ದಾರೆ. ತಾವು ಮೇಕಪ್ ಮಾಡಲು ಅನುಮತಿ ನೀಡಿಲ್ಲ ಎಂದು ಪಿಎಸ್ ಐ ನೋಟಿಸ್ ಗೆ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈ ಪ್ರಕರಣ ಸಂಬಂಧ ಪವಿತ್ರಾ, ಗೌಡ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.