Advertisement

ಜೈಲಿನಲ್ಲಿ ಕೆಲ ಹೊತ್ತು ಟಿವಿ ವೀಕ್ಷಿಸಿದ ದರ್ಶನ್‌?ಕ್ರೀಡಾ ಚಾನೆಲ್‌,ಹಿಂದಿ ಸಿನಿಮಾ ವೀಕ್ಷಣೆ

09:27 PM Jun 27, 2024 | Team Udayavani |

ಬೆಂಗಳೂರು: ನಟ ದರ್ಶನ್‌ (Darshan) ಜೈಲಿನಲ್ಲಿ ಏಕಾಂಗಿಯಾಗಿ ದಿನ ಕಳೆಯುವಂತಾಗಿದ್ದು, ಇದೀಗ ಹಿಂದಿ ಸಿನಿಮಾ ಹಾಗೂ ಕೆಲವು ನ್ಪೋರ್ಟ್ಸ್ ಚಾನೆಲ್‌ಗ‌ಳನ್ನೂ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

Advertisement

ವಿಐಪಿ ಬ್ಯಾರಕ್‌ನಲ್ಲಿರುವ ದರ್ಶನ್‌ ಸೆಲ್‌ನಲ್ಲಿ ಟಿವಿ ವ್ಯವಸ್ಥೆ ಇದೆ. ಟಿವಿಯಲ್ಲಿ ಕೆಲವು ಬಾರಿ ಹಿಂದಿ ಸಿನಿಮಾ, ಸ್ಪೋರ್ಟ್ಸ್ ಚಾನೆಲ್‌ ವೀಕ್ಷಿಸಿದ್ದಾರೆ. ಆದರೆ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಸುದ್ದಿಗಳನ್ನು ನೋಡಲು ದರ್ಶನ್‌ ನಿರಾಸಕ್ತಿ ವಹಿಸಿದ್ದಾರೆ. ಜೈಲಿನ ಬ್ಯಾರಕ್‌ ಆವರಣದಲ್ಲಿ ಆಗಾಗ ವಾಕಿಂಗ್‌ ಮಾಡುತ್ತಿರುವ ದರ್ಶನ್‌ ಸಹ ಕೈದಿಗಳಾಗಲಿ, ಜೈಲಿನ ಸಿಬ್ಬಂದಿ ಜತೆಗೆ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ತಮ್ಮನ್ನು ನೋಡಲು ಬರುವ ಅಭಿಮಾನಿಗಳು ಸೇರಿ ಯಾರ ಭೇಟಿಗೂ ದರ್ಶನ್‌ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ.

ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಯುವತಿ:

ಪ್ರತಿ ದಿನ ಅಭಿಮಾನಿಗಳು ದರ್ಶನ್‌ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಿದ್ದು ಪೊಲೀಸರಿಗೆ ಇವರನ್ನು ನಿಯಂತ್ರಿಸುವುದೇ ತಲೆನೋವಾಗಿದೆ. ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನ ನಿವಾಸಿ ವಿಶೇಷ ಚೇತನ ಯುವತಿ ಸೌಮ್ಯಾ ಎಂಬಾಕೆ ಗುರುವಾರ ದರ್ಶನ್‌ ಭೇಟಿಗೆ ಆಗಮಿಸಿದ್ದಳು. ತನ್ನ ನೆಚ್ಚಿನ ನಟನನ್ನು ನೋಡಬೇಕೆಂಬ ಆಕಾಂಕ್ಷೆ ವ್ಯಕ್ತಪಡಿಸಿದ್ದಳು. ದರ್ಶನ್‌ ಭೇಟಿಯಾಗುವವರೆಗೂ ಊಟ ಮಾಡುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಳು ಎಂದು ತಿಳಿದು ಬಂದಿದೆ. ದರ್ಶನ್‌ ಅಭಿಮಾನಿಯಾಗಿರುವ ಸೌಮ್ಯಾಳ ಪೋಷಣೆಗಾಗಿ ಆಕೆಯ ಪಾಲಕರಿಗೆ 2016ರಲ್ಲಿ ನಟ ದರ್ಶನ್‌ ಆಟೋವೊಂದನ್ನು ಕೊಡಿಸಿದ್ದರು. ಇದೇ ಆಟೋದಲ್ಲಿ ಪಾಲಕರೊಂದಿಗೆ ಜೈಲಿಗೆ ಬಂದು ದರ್ಶನ್‌ ಭೇಟಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಭೇಟಿಗೆ ಅಧಿಕಾರಿಗಳು ನಿರಾಕರಿಸಿದ್ದಾರೆ.

“ಮರ್ಡರ್‌ ಆಫ್ ರೇಣುಕಸ್ವಾಮಿ’ ಹೆಸರಿನ ವಿಕೀಪಿಡಿಯಾ ಪೇಜ್‌ ಸೃಷ್ಟಿ :

Advertisement

ಬೆಂಗಳೂರು: ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನಿಂದ ರೇಣುಕಸ್ವಾಮಿ ಹತ್ಯೆ ಪ್ರಕರಣವು ದೇಶಾದ್ಯಂತ ಭಾರಿ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಇದೀಗ “ಮರ್ಡರ್‌ ಆಫ್ ರೇಣುಕಸ್ವಾಮಿ’ ಹೆಸರಿನ ವಿಕೀಪಿಡಿಯಾ ಪೇಜ್‌ ಸೃಷ್ಟಿಯಾಗಿದೆ.  ರೇಣುಕಸ್ವಾಮಿಯ ಸಂಪೂರ್ಣ ಮಾಹಿತಿ ಕಲೆ ಹಾಕಿ ವಿಕಿಪೀಡಿಯಾವೇ ಸ್ವತಃ ಕ್ರಿಯೇಟ್‌ ಮಾಡಿದೆ. ಇದರಲ್ಲಿ ದರ್ಶನ್‌ ಆ್ಯಂಡ್‌ ತಂಡ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಅಂಶಗಳನ್ನೂ ಉಲ್ಲೇಖೀಸಲಾಗಿದೆ. ಮೊದಲು ಘಟನೆ ನಡೆದ ಬಗ್ಗೆ ಕಿರು ವಿವರ, ರೇಣುಕಸ್ವಾಮಿ ಹಿನ್ನೆಲೆ, ಕೊಲೆ ಮಾಡಿರುವುದು, ತನಿಖೆ ನಡೆಯುತ್ತಿರುವುದು, ಘಟನೆ ಸಂಬಂಧ ಕೆಲವರು ನೀಡಿರುವ ಪ್ರತಿಕ್ರಿಯೆಗಳನ್ನು ಸಹ ವಿಕಿಪೀಡಿಯಾದಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next