ಬೆಂಗಳೂರು:ಅವಧಿ ಪೂರ್ಣಗೊಳ್ಳಲಿರುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯ ಆಕ್ಷೇಪ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ಮೈಸೂರು ಮಹಾನಗರ ಪಾಲಿಕೆ, ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್‌ಗಳ ಕ್ಷೇತ್ರಪುನರ್ ವಿಂಗಡಣೆ ಹಾಗೂ ಮೀಸಲುಪಟ್ಟಿ ಆಕ್ಷೇಪಿಸಿ ಸಲ್ಲಿಕೆಯಾಗಿರುವ ಪ್ರತ್ಯೇಕ ರಿಟ್‌ಗಳ ಅರ್ಜಿಗಳ ಸಂಬಂಧ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಮೈಸೂರಿನ ಸರಸ್ವತಿ ಪುರಂನ ಆರ್ ಲಿಂಗಪ್ಪ ಸೇರಿ ಇನ್ನಿತರರು ಸೇರಿ ಸಲ್ಲಿಸಿರುವನ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ರಾಜ್ಯ ಚುನಾವಣಾ ಆಯೋಗ, ಮೈಸೂರು ಪಾಲಿಕೆ ಆಯುಕ್ತರು ಹಾಗೂ ಡಿಸಿಗೆ ನೋಟಿಸ್ ಜಾರಿಗೊಳಿಸಿದೆ.
ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆಗಳ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲು ಪಟ್ಟಿ ಕುರಿತು ಸಲ್ಲಿಕೆಯಾಗಿರುವ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನ್ಯಾಯಪೀಠ ವಿಚಾರಣೆ ನಡೆಸಲಿದೆ.
ತುಮಕೂರು ಪಾಲಿಕೆಯ ಕ್ಷೇತ್ರಪುನರ್ ವಿಂಗಡಣೆ ಹಾಗೂ ಮೀಸಲುಪಟ್ಟಿಗೆ ಆಕ್ಷೇಪಿಸಿ ಬಿ.ಎಸ್ ನಾಗೇಶ್, ಎಂ.ವೈ ರುದ್ರೇಶ್ ಸೇರಿ ಇನ್ನಿತರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅದೆ ರೀತಿ ಶಿವಮೊಗ್ಗ ಪಾಲಿಕೆ ವಿಚಾರಕ್ಕೆ ಸಂಬಂಧಿಸಿ ಪಿ. ಉಮೇಶ್ ಎಂಬುವವರು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ವಾದವೇನು?
ರಾಜ್ಯಸರ್ಕಾರ ಕ್ಷೇತ್ರಪುನರ್‌ವಿಂಗಡಣೆ ಹಾಗೂ ಮೀಸಲುಪಟ್ಟಿ ಪ್ರಕಟಣೆಯನ್ನು ಅವೈಜ್ಞಾನಿಕವಾಗಿ ಮಾಡಿದ್ದು. ಕರ್ನಾಟಕ ಪೌರಾಡಳಿತ ಕಾಯಿದೆ ನಿಯಮಗಳು, ಅಲ್ಲದೆ ಕ್ಷೇತ್ರಪುನರ್ ವಿಂಗಡಣೆ ಕುರಿತು 2014 ಹಾಗೂ 2016ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಉಲ್ಲಂ ಸಲಾಗಿದೆ. ಹೀಗಾಗಿ ಸರ್ಕಾರದ ಅಧಿಸೂಚನೆ ಕಾನೂನುಬಾಹಿರವಾಗಿದ್ದು ಅಧಿಸೂಚನೆಗಳಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.