Advertisement

ಮೂರು ದಿನದಲ್ಲಿ ಗಣತಿದಾರರ ಪಟ್ಟಿ ಸಲ್ಲಿಸಲು ಸೂಚನೆ

02:25 PM Jul 02, 2019 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ ಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ನೀಡಬೇಕಾಗಿದ್ದು, 3 ದಿನದೊಳಗೆ ಗಣತಿದಾರರ ಪಟ್ಟಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ. ಶರಣಪ್ಪ ಇ-ಆಡಳಿತದ ಕಾಮನ್‌ ಸರ್ವಿಸ್‌ ಸೆಂಟರ್‌ ಜಿಲ್ಲಾ ವ್ಯವಸ್ಥಾಪಕ ಕಿರಣ ಅವರಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 7ನೇ ಆರ್ಥಿಕ ಗಣತಿ ಹಿನ್ನೆಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್ಥಿಕ ಗಣತಿಗೆ ಬೇಕಾದ ಗಣತಿದಾರರು ಮತ್ತು ಮೇಲ್ವಿಚಾರಕರನ್ನು ಕೂಡಲೇ ನೇಮಿಸಿ ಅದರ ಪಟ್ಟಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿಗಳಿಗೆ ಸಲ್ಲಿಸಬೇಕು. ತದನಂತರ ಗಣತಿದಾರರಿಗೆ ಸೂಕ್ತ ತರಬೇತಿ ನೀಡಿ ಗಣತಿಗೆ ಅಣಿ ಮಾಡಬೇಕು ಎಂದು ಸೂಚಿಸಿದರು.

ಸ್ವಂತ ಉಪಯೋಗಕಲ್ಲದ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮ, ಘಟಕಗಳ ಸಂಪೂರ್ಣ ಚಿತ್ರಣ ಪಡೆಯುವುದೇ ಆರ್ಥಿಕ ಗಣತಿ ಮುಖ್ಯ ಉದೇಶವಾಗಿದೆ ಎಂದು ಹೇಳಿದರು.

ಗಣತಿಯಲ್ಲಿ ಬ್ಲಾಕ್‌ ವಾರು ಪ್ರತಿ ಮನೆ-ಮನೆಗೂ ಗಣತಿದಾರರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಇಲ್ಲಿ ಸಂಗ್ರಹಿಸುವ ಮಾಹಿತಿ ದೇಶದ ಪ್ರಗತಿಗೆ, ರಾಷ್ಟ್ರೀಯ ತಲಾ ಅದಾಯ ಮತ್ತು ಜಿಡಿಪಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ನಿಖರ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ಸಂಗ್ರಹಿಸಬೇಕು ಎಂದು ಸಿಎಸ್‌ಸಿ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

7ನೇ ಆರ್ಥಿಕ ಗಣತಿ ಇ-ಆಡಳಿತದ ಕಾಮನ್‌ ಸರ್ವಿಸ್‌ ಸೆಂಟರ್‌ನಿಂದ ಪ್ರಥಮ ಹಂತದ ಕ್ಷೇತ್ರ ಸಮೀಕ್ಷೆ ನಡೆಸಲಾಗುತ್ತದೆ. ಮಾಹಿತಿ ಸಂಗ್ರಹಣೆ ನಂತರ ಪುನರ್‌ಪರಿಶೀಲಿಸುವ ಎರಡನೇ ಹಂತದ ಜವಾಬ್ದಾರಿ ಅಂಕಿ-ಸಂಖ್ಯಾ ಇಲಾಖೆ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯಾಗಿರುತ್ತದೆ. ಗಣತಿ ಕಾರ್ಯ ಸುಗಮವಾಗಿ ನಡೆಯಲು ಜಲ್ಲಾ ಸಮನ್ವಯ ಸಮಿತಿಯ ಎಲ್ಲ ಸದಸ್ಯರು ಸಿ.ಎಸ್‌.ಸಿ. ಸಂಸ್ಥೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.

Advertisement

ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಸುವರ್ಣಾ ಮಾತನಾಡಿ, ಇದುವರೆಗೆ ದೇಶದಲ್ಲಿ 6 ಆರ್ಥಿಕ ಗಣತಿ ಕಾರ್ಯ ನಡೆದಿದೆ. ಪ್ರಸ್ತುತ 7ನೇ ಆರ್ಥಿಕ ಗಣತಿಯಾಗಿದೆ. ಈ ಗಣತಿಯಲ್ಲಿ ಮೊಬೈಲ್ ಆಪ್‌ ಮೂಲಕವೇ ಮಾಹಿತಿ ಸಂಗ್ರಹ ಮಾಡುತ್ತಿರುವುದು ವಿಶೇಷವಾಗಿದೆ. 2012-13ನೇ ಸಾಲಿನಲ್ಲಿ ನಡೆಸಲಾದ 6ನೇ ಆರ್ಥಿಕ ಗಣತಿಯಲ್ಲಿ ಕನಿಷ್ಠ 1200 ಗಣತಿದಾರರು ಮತ್ತು 700 ಮೇಲ್ವಿಚಾರಕರನ್ನು ಗಣತಿಗೆ ಬಳಸಿಕೊಳ್ಳಲಾಗಿತ್ತು. ಅಷ್ಟು ಸಂಖ್ಯೆ ಸಿಬ್ಬಂದಿಯನ್ನು ಬಾರಿಯು ನೇಮಿಸುವ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೇಷನ್‌ (ಎನ್‌ಎಸ್‌ಎಸ್‌ಒ) ಜಿಲ್ಲಾ ಅಧಿಧೀಕ್ಷಕ ಮಹಾದೇವಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಘೋಜಿ, ಜಿಪಂ ಡಿಆರ್‌ಡಿಎ ಯೋಜನಾ ನಿರ್ದೇಶಕಿ ಪ್ರವೀಣ ಪ್ರಿಯಾ, ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಕಿರಣ, ಡಿಎಚ್ಒ ಡಾ| ಮಾಧವರಾವ ಕೆ. ಪಾಟೀಲ, ಡಿಡಿಪಿಐ ಶಾಂತಗೌಡ ಪಾಟೀಲ, ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next