Advertisement

ಖಾಸಗಿ ಬಸ್‌ ಮಾಲೀಕನಿಗೆ ನೋಟಿಸ್

06:18 PM Jun 16, 2021 | Team Udayavani |

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದಕೋವಿಡ್‌ ಮಾರ್ಗಸೂಚಿಗಳನ್ನುಉಲ್ಲಂಘಿಸಿ, ಕೈಗಾರಿಕಾ ಪ್ರದೇಶದಿಂದಕಾರ್ಮಿಕರನ್ನು ಕರೆತರುತ್ತಿದ್ದ ಖಾಸಗಿಬಸ್‌ ಮಾಲೀಕನಿಗೆ ನಗರ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಕೋವಿಡ್‌ ಮಾರ್ಗಸೂಚಿಯಂತೆಬಸ್‌, ಆಟೋ, ಕಾರುಗಳಲ್ಲಿ ಅಂತರಕಾಪಾಡಿಕೊಂಡು ಪ್ರಯಾಣಿಕರನ್ನುಕರೆದೊಯ್ಯಬೇಕು. ಆದರೆ, ಈಬಸ್ಸಿನಲ್ಲಿ ಸುಮಾರು 60ಕ್ಕೂ ಹೆಚ್ಚುಜನರನ್ನು ಸಾಮಾನ್ಯ ದಿನಗಳಂತೆ ತುಂಬಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣಗಳು ಇವೆ. ಇಂತಹಸಂದರ್ಭದಲ್ಲಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಿರುವುದು ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ದೂರು ದಾಖಲಿಸಿ, ದಂಡ ವಿಧಿಸಲಾಗುತ್ತದೆ. ಈಗಸೂಕ್ತ ಕಾರಣ, ದಾಖಲಾತಿಗಳನ್ನು ಹಾಜರುಪಡಿಸಲು ನೋಟಿಸ್‌ಜಾರಿ ಮಾಡಲಾಗಿದೆ ಎಂದು ನಗರ ಠಾಣೆಯ ಗೋವಿಂದ್‌ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿನ ಹಲವಾರು ಮೆಡಿಕಲ್‌ಸಂಬಂಧ ಕೈಗಾರಿಕೆಗಳು ಕೆಲಸ ನಿರ್ವಹಿಸುತ್ತಿವೆ. ಹೀಗಾಗಿಖಾಸಗಿ ಬಸ್‌ಗಳು ಕಾರ್ಮಿಕರನ್ನು ಕರೆದೊಯ್ಯುತ್ತಿವೆ. ಆದರೆ,ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದುಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next