Advertisement
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಲು ಆಗಮಿಸಿದ್ದ ವಿರೋಧ ಪಕ್ಷದ ಬರ ಅಧ್ಯಯನ ತಂಡದ ಸಭೆಯಲ್ಲಿ ಮಾತನಾಡಿದರು.
Related Articles
Advertisement
ಅನುದಾನ ಬಿಡುಗಡೆ: ಈಗ ಸದ್ಯ ಜಿಲ್ಲೆಯ 10 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 7 ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ಹಾಗೂ 3 ಗ್ರಾಮಕ್ಕೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಎನ್‌ಆರ್‌ಡಿಪಿ ಯೋಜನೆಯಲ್ಲಿ 13.29 ಲಕ್ಷ ಹಾಗೂ ಎಂಎನ್‌ಪಿ ಅಡಿಯಲ್ಲಿ 1 ಕೋಟಿ ಅನುದಾನ ಲಭ್ಯವಿದೆ. ಟಾಸ್ಕ್ ´ೋರ್ಸ್‌ನಿಂದ 1.25 ಲಕ್ಷ ಮೊದಲ ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಯವರು ಸಭೆಗೆ ಮಾಹಿತಿ ನೀಡಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಬರದಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 39,438 ಹೆಕ್ಟೇರ್ ಬೆಳೆ ನಾಶವಾಗಿದೆ. ಮುಂಗಾರು ಮಳೆ ವೈಫಲ್ಯದಿಂದ ಶೇ. 80 ರಷ್ಟು ಹಾಗೂ ಹಿಂಗಾರು ಮಳೆ ಕೊರತೆಯಿಂದ ಶೇ.100ರಷ್ಟು ಬೆಳೆಗಳು ನಾಶವಾಗಿದೆ. ರೈತರಿಗೆ ಬೆಳೆ ನಷ್ಟ ಪರಿಹಾರಕ್ಕೆ 26.75 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬರಗಾಲದಲ್ಲೂ ಒಟ್ಟು 13 ವಾರಕ್ಕೆ ಆಗುವಷ್ಟು ಮೇವು ಲಭ್ಯವಿದೆ. ಇತ್ತೀಚಿಗೆ 72 ಸಾವಿರ ಮೇವಿನ ಕಿಟ್ ಪೂರೈಕೆಯಾಗಿದ್ದು, ಈಗಾಗಲೇ ಕೆ.ಸಿ. ವ್ಯಾಲಿ ನೀರು 8 ಕೆರೆಗಳಿಗೆ ಹರಿದಿದ್ದು ಆ ಭಾ ಗದಲ್ಲೂ ಮೇವು ಬೆಳೆಯಲು ರೈತರಿಗೆ ಮೇವು ಕೀಟ್ ಸರಬರಾಜು ಮಾಡಲಾಗಿದೆ. ಬೇಡಿಕೆ ಇಟ್ಟಿರುವ ರೈತರಿಗೂ ನೀಡಲಾಗುತ್ತಿದೆ ಎಂದು ವಿವರಿಸಿದರು.
ವೇತನ ಪಾವತಿಸಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ನರೇಗಾ ಯೋಜನೆ ಪ್ರಗತಿಯಲ್ಲಿ ರಾಜ್ಯಮಟ್ಟದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. 25 ಲಕ್ಷ ಮಾನವ ಉದ್ಯೋಗ ಸೃಷ್ಟಿ ಇದ್ದ ಗುರಿಯನ್ನು, 30 ಲಕ್ಷಕ್ಕೆ ಏರಿಸಲಾಗಿದೆ. ವೇತನ ಸಹ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲೆಯ ಅಂತರ್ಜಲ ಹೆಚ್ಚಳಕ್ಕಾಗಿ 1,380 ಕೋಟಿ ವೆಚ್ಚ ಮಾಡಿ ಕೆ.ಸಿ. ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಎರಡು ಹಂತದಲ್ಲಿ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಶ್ರೀಕೃಷ್ಣ ದೇವರಾಜ ಒಡೆಯರ ಕಾಲದಲ್ಲಿ ನಿರ್ಮಾಣವಾಗಿರುವ ಕೆರೆಗಳು ಬೆಳ್ಳಂದೂರು, ಚಲ್ಲಘಟ್ಟ ಕೆರೆಗಳ ಮಾದರಿಯಲ್ಲಿ ಸೃಷ್ಟಿಯಾಗುತ್ತವೊ ಎಂಬ ಅಂತಕ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಬೆಳ್ಳಂದೂರು, ಚಲ್ಲಘಟ್ಟ ಕೆರೆಗಳಲ್ಲಿ ಬೆಂಕಿ, ನೋರೆ ಕಾಣಿಸಿಕೊಂಡಿದೆ. ಮೂರು ಬಾರಿ ಶುದ್ಧೀಕರಿಸಿ ಹರಿಸುವುದರಿಂದ ಆಗುವ ಅನಾಹುತವನ್ನು ತಪ್ಪಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ 350 ಕೋಟಿ ಹಣ ವೆಚ್ಚವಾಗುತ್ತದೆ. ಜತೆಗೆ ಮೇಕೆದಾಟು ಯೋಜನೆ ಕಾಮಗಾರಿ ಪೂರ್ಣಗೊಳಿಸಲು ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಭಾರತಿ, ರವಿಕುಮಾರ್, ಮಾಜಿ ಶಾಸಕರಾದ ವೈ.ಸಂಪಂಗಿ, ಬಚ್ಚೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಲಿಮುಳಬಾಗಿಲು: ಬರ ವೀಕ್ಷಣೆಗೆ ಜಿಲ್ಲೆಗೆ ಶುಕ್ರವಾರ ಆಗಮಿಸಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಕೇವಲ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಪರಿಸ್ಥಿತಿ ಅಧ್ಯಯನ ನಡೆಸಿ, ಸರ್ಕಾರ ಬರದಿಂದ ತತ್ತರಿಸಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಬೆಳಗ್ಗೆ 11ಕ್ಕೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೆ ಗ್ರಾಮಕ್ಕೆ ಆಗಮಿಸಬೇಕಿದ್ದ ಬರ ಅಧ್ಯಯನ ತಂಡ ಒಂದು ತಾಸು ತಡವಾಗಿ ಆಗಮಿಸಿತು. ಗಣಪತಿ ದೇವಾಲಯದಲ್ಲಿ ಪೂಜೆ ಮುಗಿಸಿದ ಯಡಿ ಯೂರಪ್ಪ ನೇತೃತ್ವದ ತಂಡ ಅದೇ ಗ್ರಾಮದ ರೈತ ವೆಂಕಟರಾಮ್ ತೊಗರಿ ಹಾಗೂ ಎ.ವೆಂಕಟರಾಮಪ್ಪ ಟೊಮೆಟೋ ಬೆಳೆಯನ್ನು ವೀಕ್ಷಿಸಿದರು. ರೈತರು ತಮ್ಮ ಸಮಸ್ಯೆಯನ್ನು ಹೇಳಲು ಮುಂದಾದಾಗ ನನಗೆ ಇಲ್ಲಿನ ಪರಿಸ್ಥಿತಿಗೊತ್ತಿದೆ ಅಣ್ಣಯ್ಯ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವುದಾಗಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಯಡಿಯೂರಪ್ಪ ದೇವಾಲಯಕ್ಕೆ ಬರುವ ವಿಚಾರ ತಿಳಿದಿದ್ದ ಅಂಗವಿಕಲ ಯಲ್ಲಪ್ಪ ಹೂವಿನ ಹಾರ ಹಾಕಿ ಮಾತನಾಡಿಬೇಕು ಎಂದು ದೇವಾಲಯದ ಬಾಗಿಲಲ್ಲೇ ಕುಳಿತಿದ್ದ. ಅಂಗವಿಕಲ ಬಾಲಕ ಯಡಿಯೂ ರಪ್ಪ ಅವರನ್ನು ಮಾñನಾಡಿಸಲು ಅವಕಾಶ ಕಲ್ಪಿಸುವುದಾಗಿ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದರು. ಆದರೆ ಪೊಲೀಸರು ಈ ಜನರ ಮಧ್ಯೆ ನೀನು ಮಾತನಾಡಲು ಆಗುವುದಿಲ್ಲ. ಬೇರೆ ದಿನ ಬರುತ್ತಾರೆ ಬಾ ಹೋಗು ಎಂದು ಗದರಿ ಕಳುಹಿಸಿದರು. ಕುರುಡಮಲೆ ದೇವಾಲಯಕ್ಕೆ ಆಯ್ದ ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಯಡಿಯೂರಪ್ಪ ಆಗಮಿಸಿದ ಹಿನ್ನಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ದೇವಾ ಲಯಕ್ಕೆ ನುಗ್ಗಲು ಮುಂದಾದರು. ಪೂಜೆ ಮುಗಿಸಿದ ಯಡಿಯೂರಪ್ಪ ತಂಡ ಪ್ರವಾಸಿ ಯಾತ್ರಿ ಮಂದಿರದಲ್ಲಿ ಉಪಹಾರ ಸೇವಿಸಿ ಬರ ವೀಕ್ಷಣೆ ಆರಂಭಿಸಿದರು. ಕೇವಲ 15 ನಿಮಿಷಕ್ಕೆ ವೀಕ್ಷಣೆ ಮುಗಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಚಿಕ್ಕಬಳ್ಳಾಪುರಕ್ಕೆ ತೆರಳಿದರು. ರೆಸಾರ್ಟ್ ರಾಜಕಾರಣದಿಂದ ಬರ ನಿರ್ವಹಣೆಗೆ ಕುತ್ತು ಕೋಲಾರ: ಬರ ನಿರ್ವಹಣೆಗೆರಾಜ್ಯ ಸರ್ಕಾರ ಪ್ರತಿಜಿಲ್ಲೆಗೆ ಬಿಡುಗಡೆ ಮಾಡಿ ರುವ 50 ಲಕ್ಷರೂ. ಅನುದಾನ ತೀರ ಕಡಿಮೆಯಾಗಿದ್ದು, ಈ ಅನುದಾನದಿಂದ ಬರ ನಿರ್ವಹಣೆ ಸಾಧ್ಯವಾಗುವುದಿಲ್ಲ, ಬರಪೀಡಿತ ಪ್ರದೇಶದಲ್ಲಿ ಸಚಿವರು ಪ್ರವಾಸವಿಲ್ಲದೆ ಪರಿಹಾರ ಕಾಮಗಾರಿ ವಿಳಂಬವಾಗುತ್ತಿದೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕಟಕಿಯಾಡಿದರು. ಜಿಲ್ಲೆಯಲ್ಲಿ ಬರ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬರಗಾಲ ನಿರ್ವಹಣೆಗೆ ರಾಜ್ಯ ಸರ್ಕಾರಆದ್ಯತೆ ನೀಡುತ್ತಿಲ್ಲ, ರೆಸಾರ್ಟ್‌ರಾಜಕಾರಣ ಮಾಡಿಕೊಂಡು ಕಾಂಗ್ರೆಸ್‌ನವರು ಹೊಡೆದಾಟ, ಬಡಿದಾಟದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬರಗಾಲ ನಿರ್ವಹಣೆ ನೀಗಿಸದೆ ಕಾಲಹರಣ ಮಾಡುತ್ತಿದ್ದಾರೆಎಂದು ಟೀಕಿ ಸಿದರು. ಕಾಂಗ್ರೆಸ್‌ನಲ್ಲಿ ನಡೆಯುತ್ತಿ ರುವ ಬಡಿದಾಟಗಳಿಗೆ ಪಕ್ಷದವರೇ ಹೊಣೆ ಯಾಗಿದ್ದು, ಪಕ್ಷೇತರ ಶಾಸಕರಿಬ್ಬರು ಬಿಜೆಪಿ ಜೊತೆಯಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಪಕ್ಷೇತರರೊಂದಿಗೆ ಪ್ರಾಮಾಣಿಕ ಕೆಲಸ: ಪಕ್ಷೇತರ ಇಬ್ಬರು ಸೇರಿ 106 ಮಂದಿ ಬಿಜೆಪಿ ಶಾಸಕರು ವಿರೋಧ ಪಕ್ಷವಾಗಿದ್ದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು. ಜೆಡಿಎಸ್‌ರಾಜ್ಯಾಧ್ಯಕ್ಷ ವಿಶ್ವನಾಥ ಉಪದೇಶ ಬಿಟ್ಟು, ಬರಪೀಡಿತ ಪ್ರದೇಶಗಳಿಗೆ ಅನುದಾನ ಬಿಡುಗಡೆ ಮಾಡಿಸಲಿ ಎಂದು ಆಗ್ರಹಿಸಿದ ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಬಜೆಟ್‌ನಲ್ಲಿ ನೀಡಿರುವ ಭರವಸೆಗಳನ್ನು ಈಡೇರಿ Óುತ್ತಿಲ್ಲ ಎಂದು ಆರೋಪಿಸಿದರು. ಸಚಿವ ಪುಟ್ಟರಂಗಶೆಟ್ಟಿಯನ್ನು ಸಂಪುಟದಿಂದಕೈಬಿಡಿ: ಸಚಿವ ಪುಟ್ಟರಂಗಶೆಟ್ಟಿ ಆಪ್ತ ಸಹಾಯಕ ಮೋಹನ್ ಮೂಲಕ 24.76 ಲಕ್ಷ ಹಣದ ವಸೂಲಿ ಮಾಡಿದ ಆರೋಪ ಹಿನ್ನಲೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿಯನ್ನು ತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಸಚಿವ ಪ್ರಿಯಾಂಕ ಖರ್ಗೆ ಮಾಧ್ಯಮದ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಪ್ರಿಯಾಂಕ ಖರ್ಗೆಯನ್ನು ಅವನು ಎಂದು ಏಕವಚನದಿಂದಲೇ ಸಂಭೋದಿಸಿ ಮಾಧ್ಯಮದವರ ವಿರುದ್ಧ ಹಗುರವಾಗಿ ಮಾತನಾಡಿರುವುದು ಸರಿಯಲ್ಲ, ಈ ಬಗ್ಗೆ ಬಿಜೆಪಿ ಹೋರಾಟ ಮಾಡಲು ತೀರ್ಮಾನ ಮಾಡಿದೆ ಎಂದು ತಿಳಿಸಿದರು