ಬೆಂಗಳೂರು: ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪಿನಂತೆ ಸಿದ್ಧಪಡಿಸಲಾಗಿ ರುವ 1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಯ ಪರಿಷ್ಕೃತ ಪಟ್ಟಿಯನ್ನು ಕೂಡಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಹೈಕೋರ್ಟ್ ವಿಭಾಗೀಯ ಪೀಠ 2016ರ ಜೂ.21ರಂದು ನೀಡಿದ್ದ ತೀರ್ಪು ಜಾರಿ ಗೊಳಿಸದ ಸರ್ಕಾರದ ವಿರುದ್ಧ ಎಸ್. ಶ್ರೀನಿ ವಾಸ್ ಮತ್ತಿತರೆ ಅಭ್ಯರ್ಥಿಗಳು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ.ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಎಂ.ಬಿ. ನರಗುಂದ ವಾದ ಮಂಡಿಸಿ, ಸರ್ಕಾರ ಸಿದ್ಧಪಡಿಸಿರುವ 115 ಅಧಿಕಾರಿಗಳ ಪಟ್ಟಿಗೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ಆ ಅಧಿಕಾರಿಗಳಿಗೆ ಇದುವರೆಗೂ ಹುದ್ದೆ ನಿಗದಿ ಮಾಡಿಲ್ಲ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಯಾವುದೇ ವರ್ಗಾವಣೆ ಅಥವಾ ನೇಮಕಾತಿ ಮಾಡು ವಂತಿಲ್ಲ. ಜತೆಗೆ ಪಟ್ಟಿಯಲ್ಲಿರುವ ಹಲವು ಅಧಿ ಕಾರಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದಾರೆ ನ್ಯಾಯಪೀಠಕ್ಕೆ ತಿಳಿಸಿದರು.
ಈ ವಾದಕ್ಕೆ ಅಸಮಾಧಾನಗೊಂಡ ವಿಭಾಗೀಯ ಪೀಠ, ಸ್ಥಾನಪಲ್ಲಟಗೊಂಡ 115 ಅಧಿಕಾರಿಗಳ ಪಟ್ಟಿಯನ್ನು ಸರ್ಕಾರ ಮೊದಲು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿ. ನಂತರ ಆ ಪಟ್ಟಿಯಂತೆ ಎಲ್ಲ ಅಧಿಕಾರಿಗಳು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಮುಂದೆ ಹಾಜರಾಗಲಿ. ಇನ್ನೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ಮೇ 23ರಂದು ಫಲಿತಾಂಶ ಪ್ರಕಟಗೊಂಡ ನಂತರ ವರ್ಗಾವಣೆ ಗೊಂಡಿರುವ ಇಲಾಖೆಯ ಮುಖ್ಯಸ್ಥರ ಮುಂದೆ ಹಾಜರಾಗಿ ತಮ್ಮ ಹುದ್ದೆ ಪಡೆದುಕೊ ಳ್ಳಲಿ ಎಂದು ಸೂಚಿಸಿತು. ಅನಂತರ ವಿಚಾರಣೆ ಯನ್ನು ಜೂ. 10ಕ್ಕೆ ಮುಂದೂಡಿತು.