ಹುಬ್ಬಳ್ಳಿ: ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗವಲ್ಲದೇ ಬಹಳಷ್ಟು ಜನ ಒಳಗಾಗಿದ್ದಾರೆ. ಸದ್ಯ ನಾವು ಅದರ ಮೂಲ ಹುಡುಕುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಯವರೆಗೆ ಕೇವಲ ಗಾಂಜಾ ವ್ಯವಹಾರ ಮಾಡೋರನ್ನು ಬಂಧಿಸುತ್ತಿದ್ದರು. ಡಾರ್ಕ್ ನೈಟ್ ಎನ್ನೋ ಆನ್ ಲೈನ್ ವೆಬ್ ಸೈಟ್ ನ್ನು ಬೇಧಿಸಿದ್ದೇವೆ. ಪೋಸ್ಟಲ್ ಮೂಲಕವು ಸರಬರಾಜು ಆಗುತ್ತಿತ್ತು. ಅಂತಾರಾಜ್ಯ ವಿದೇಶದ ಮೂಲಗಳನ್ನು ಬೇಧಿಸುತ್ತಿದ್ದೇವೆ ಎಂದರು.
ಎನ್ ಸಿಬಿಯವರು ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದ್ದಾರೆ. ಅದರಲ್ಲಿ ಕೆಲವು ಚಿತ್ರರಂಗದವರಿದ್ದಾರೆ ಎನ್ನೋ ಮಾಹಿತಿ ಇದೆ. ಆ ಬಗ್ಗೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಶನಿವಾರ ಇಂದ್ರಜಿತ್ ಲಂಕೇಶ ಅವರಿಗೆ ನೋಟೀಸ್ ನೀಡಿದ್ದೇವೆ. ಅವರು ಇವತ್ತು ಏನು ಮಾಹಿತಿ ಕೊಡುತ್ತಾರೆ ನೋಡೋಣ. ನಮ್ಮ ಸಿಸಿಬಿಯವರಿಗೆ ಕೂಲಂಕುಷವಾಗಿ ತನೀಖೆ ಮಾಡಲು ಹೇಳಿದ್ದೇವೆ. ಚಿತ್ರರಂಗ ಇರಲಿ ಇನ್ಯಾವುದೇ ಇರಲಿ ನಾವು ಬಿಡಲ್ಲ ಎಂದರು.
ಇದನ್ನೂ ಓದಿ: ಭಾರತೀಯ ಬಳಕೆದಾರರಿಗೆ ಗೂಗಲ್ ಪೇ ಶುಭಸುದ್ದಿ: ಬರುತ್ತಿದೆ ಹೊಸ ಫೀಚರ್ !
ಕಾಲೇಜು ಆಡಳಿತ ಮಂಡಳಿಗಳಿಗೂ ಸೂಚನೆ ನೀಡುತ್ತೇವೆ. ಇದರಲ್ಲಿ ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರ. ಅವರ ಮೇಲೆ ರಾಜಕಾರಣಿಗಳ ಪ್ರಭಾವ ಸತ್ಯಕ್ಕೆ ದೂರವಾಗಿದೆ ಎಂದರು.
ಅವಳಿ ನಗರದಲ್ಲಿ ನಿರಂತರವಾಗಿ ಕ್ರೈಂ ನಡೆಯುತ್ತಿದ್ದರು ಕಚೇರಿಯಲ್ಲಿ ಕೂತು ಆದೇಶಗಳನ್ನು ಕೊಡುತ್ತ ಕೂಡುವ ಹಾಗಿಲ್ಲ. ಮೊದಲು ಹೊರಗೆ ಬಂದು ನೋಡಿಕೊಳ್ಳಿ. ಇನ್ನು ಮುಂದೆ ಏನೇ ಅಪರಾಧ ನಡೆದರು ನೀವೇ ಜವಾಬ್ದಾರರು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ತಾಂಜೇನಿಯಾ- ಗೋವಾ- ಶಿವಮೊಗ್ಗ .. ಅಪರೂಪದ ನೀರಾನೆ ದಂತ ಕಳ್ಳಸಾಗಾಣಿಕೆ ಹಿಂದಿದೆ ರೋಚಕ ಕಹಾನಿ