ಹೊಸದಿಲ್ಲಿ: ದೇಶದ ಹಲವಾರು ಕೊರೊನಾ ಸೋಂಕಿತರು ಮನೆಗಳಲ್ಲೇ ಹೋಂ ಐಸೊಲೇಶನ್ ಆಗುತ್ತಿರುವುದ ರಿಂದ ವೈದ್ಯರು ದೂರವಾಣಿ ಆಧಾರಿತ ಸಂವಹನದ (ಟೆಲಿ ಕಮ್ಯೂನಿಕೇಷನ್) ಮೂಲಕ ಸೋಂಕಿತರ ಆರೋಗ್ಯ ವಿಚಾರಿಸಿಕೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಸೂಚಿಸಿದ್ದಾರೆ.
ಜಮ್ಮು- ಕಾಶ್ಮೀರ, ಹಿಮಾ ಚಲ ಪ್ರದೇಶ, ಪಂಜಾಬ್, ಚಂಡೀಗಢ, ಉತ್ತರಾಖಾಂಡ, ಹರಿಯಾಣ, ದಿಲ್ಲಿ, ಲಡಾಖ್, ಉತ್ತರ ಪ್ರದೇಶ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಡನೆ ಸಂವಾದ ನಡೆಸಿದ ಅವರು, ಸೋಂಕಿತರ ಶುಶ್ರೂಷೆಗೆ ಹಬ್ ಆ್ಯಂಡ್ ಸ್ಪೋಕ್ ಮಾದರಿ ಅನುಸರಿಸಬೇಕು. ಸೋಂಕಿತರ ಅಹವಾಲು ಆಲಿಸಲು ಹೆಚ್ಚೆಚ್ಚುಟೆಲಿ ಕಮ್ಯೂನಿಕೇಷನ್ ಸೇವೆಗಳನ್ನು ಆರಂಭಿಸಬೇಕು. ಆ ಮೂಲಕ, ಎಲ್ಲ ಸೋಂಕಿತರಿಗೆ ತಜ್ಞರ ಸಲಹೆಗಳು ತ್ವರಿತವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ:ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರಕಾರದ ಇ-ಸಂಜೀವಿನಿ ಟೆಲಿಮೆಡಿಸಿನ್ ವ್ಯವಸ್ಥೆಯಿಂದ ದೇಶದ 2.6 ಕೋಟಿ ಜನರಿಗೆ ಅವರಿರು ವಲ್ಲಿಗೆ ಔಷಧ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ, ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆ ಗ ಳಲ್ಲಿ 2.55 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 614 ಮಂದಿ ಸಾವಿಗೀಡಾಗಿದ್ದಾರೆ.