Advertisement

Pollution: ಬೆಳಗ್ಗೆ ವಾಕಿಂಗ್‌ ಬೇಡ- ದಿಲ್ಲಿಗರಿಗೆ ಸೂಚನೆ

11:23 PM Nov 11, 2023 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯ ಸುಧಾರಣೆಗೆ ಹೆಣಗಾಡುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಸಚಿವಾಲಯ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಅದರ ಪ್ರಕಾರ ಹೊಸದಿಲ್ಲಿಯ ನಾಗರಿಕರು ಬೆಳಗ್ಗಿನ ವೇಳೆ ಮಾರ್ನಿಂಗ್‌ ವಾಕ್‌ಗೆ ತೆರಳುವುದು ಬೇಡ ಎಂದು ಸಲಹೆ ಮಾಡಿದೆ. ದಿಲ್ಲಿ ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಸೂಚನೆ ನೀಡಿದೆ.

Advertisement

ಮಾಲಿನ್ಯ ತಡೆಯುವ ಕರ್ಚೀಫ‌ುಗಳಿಂದ ಮೂಗು, ಬಾಯಿಯನ್ನು ಮುಚ್ಚಿಕೊಳ್ಳುವುದು, ಎನ್‌95 ಮಾಸ್ಕ್ ಬಳಸುವುದು, ಏರ್‌ ಪ್ಯೂರಿಫೈರ್‌ಗಳನ್ನು ಬಳಸುವುದು ಮತ್ತು ಒಳಾಂಗಣದಲ್ಲಿ ನಡೆಯುವ ಸಮಾರಂಭಗಳಿಂದ ದೂರ ಇರಿ ಎಂದು ಸೂಚನೆ ಯಲ್ಲಿ ತಿಳಿಸಲಾಗಿದೆ. ಮಕ್ಕಳಿಗಾಗಿ ವಿಶೇಷ ಮಾರ್ಗಸೂಚಿ ನೀಡಿ ಶಾಲೆಗಳಲ್ಲಿ ಬಳಪಗಳ ಬದಲಿಗೆ ಮಾರ್ಕರ್‌ ಬಳಸಲು, ಕಾರಿನಲ್ಲೇ ಶಾಲೆಗೆ ತೆರಳುವುದು, ಹೊರಾಂಗಣದ ಆಟಗಳಿಂದ ದೂರವಿರು ವುದನ್ನು ಖಚಿತಪಡಿಸಿಕೊಳ್ಳಲು ಹೇಳಿದೆ. ಏತನ್ಮಧ್ಯೆ ದಿಲ್ಲಿಯಲ್ಲಿ ಮಳೆಯಿಂದಾಗಿ ವಾಯುಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next