Advertisement

ಜಾಹೀರಾತು ಫ‌ಲಕ ತೆರವಿಗೆ ಸೂಚನೆ

12:19 AM Feb 23, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿರುವ ಜಾಹೀರಾತು (ಕಬ್ಬಿಣದ ಸ್ಟ್ರಕ್ಚರ್‌) ಫ‌ಲಕಗಳನ್ನು 15ದಿನಗಳ ಒಳಗಾಗಿ ತೆರವು ಮಾಡುವುದಕ್ಕೆ ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಅವರು ಎಂಟು ವಲಯದ ಜಂಟಿ ಆಯುಕ್ತರಿಗೆ ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಪತ್ರ ಬರೆದಿದ್ದಾರೆ.

Advertisement

ನಗರದಲ್ಲಿ ಎಲ್ಲೆಲ್ಲಿ, ಎಷ್ಟು ಜಾಹೀರಾತು (ಕಬ್ಬಿಣದ ಸ್ಟ್ರಕ್ಚರ್‌) ಫ‌ಲಕಗಳನ್ನು ತೆರವು ಮಾಡುವುದು ಬಾಕಿ ಉಳಿದಿದೆ ಎನ್ನುವ ಬಗ್ಗೆ ವಿವರ ನೀಡುವಂತೆಯೂ ಸೂಚಿಸಿದ್ದು, ನ್ಯಾಯಾಲಯದಲ್ಲಿ ತಡೆಯಾಜ್ಞೆ ಅಥವಾ ಮಧ್ಯಂತರ ಆದೇಶ ಹೊರತುಪಡಿಸಿ, ಖಚಿತಪಡಿಸಿರುವ ಅನಧಿಕೃತ ಜಾಹೀರಾತು ಫ‌ಲಕಗಳಿಗೆ ಸಂಸ್ಥೆಯವರು ಪಾವತಿಸಬೇಕಾಗಿ ರುವ ಸಂಪೂರ್ಣ ಜಾಹೀರಾತು ಬಾಕಿ, ತೆರಿಗೆ, ಬಡ್ಡಿ ಮೊತ್ತ ಸೇರಿದಂತೆ ದಂಡ ಮೊತ್ತವನ್ನು ವಸೂಲಿ ಮಾಡಿಕೊಂಡು ಜಾಹೀರಾತು ಫ‌ಲಕವನ್ನು ತೆರವುಗೊಳಿಸುವಂತೆ ಫ‌ಲಕಗಳ ಮಾಲೀಕರಿಗೆ ನೋಟಿಸ್‌ ನೀಡಲು ಸೂಚನೆ ನೀಡಿದ್ದಾರೆ.

ಒಂದೊಮ್ಮೆ ಜಾಹೀರಾತು ಫ‌ಲಕಗಳ ಮಾಲೀಕರು ನೋಟಿಸ್‌ ಜಾರಿ ಮಾಡಿದ ಏಳು ದಿನಗಳ ಒಳಗಾಗಿ ಫ‌ಲಕಗಳನ್ನು ತೆರವುಗೊಳಿಸದಿದ್ದರೆ, ಖುದ್ದು ಪಾಲಿಕೆಯ ಅಧಿಕಾರಿಗಳೇ ತೆರವು ಮಾಡಿ ತೆರವು ಮಾಡುವಂತೆ ಹಾಗೂ ನೋಟಿಸ್‌ ನೀಡುವ ವೇಳೆ ಜಾಹೀರಾತು ಫ‌ಲಕಗಳನ್ನು ತೆರವು ಮಾಡಲು ನಿರ್ಲಕ್ಷ್ಯ ವಹಿಸಿದ್ದು, ಬಾಕಿ ಮೊತ್ತ ಪಾವತಿ ಮಾಡದೆ ಇರುವುದು ಹಾಗೂ ಜಾಹೀರಾತು ಫ‌ಲಕಗಳ ತೆರವು ಮಾಡಲು ಪಾಲಿಕೆ ಮಾಡಿದ ವೆಚ್ಚವನ್ನು ಕಾನೂನು ರೀತಿಯಲ್ಲಿ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೇಖೀಸುವಂತೆ ತಿಳಿಸಲಾಗಿದೆ.

ನಗರದಲ್ಲಿ ಹೋರ್ಡಿಂಗ್ಸ್‌, ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ಮೇಲೆ ಪಾಲಿಕೆ ವ್ಯಾಪ್ತಿಯಲ್ಲಿರುವ ಕಬ್ಬಿಣದ ಸ್ಟ್ರಕ್ಚರ್‌ಗಳನ್ನು ತೆರವುಗೊಳಿಸು ವುದು ಕಗ್ಗಂಟಾಗಿ ಪರಿಣಮಿಸಿದೆ. ಸ್ಟ್ರಕ್ಚರ್‌ ಅಳವಡಿಸಿ ಕೊಂಡಿರುವ ಕೆಲವರು ಕೋರ್ಟ್‌ ಮೊರೆ ಹೋಗಿರುವು ದರಿಂದ ಕೆಲವೆಡೆ ಸ್ಟ್ರಕ್ಚರ್‌ ತೆರವು ಮಾಡದೆ ಪಾಲಿಕೆ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಖಾಸಗಿ ಜಾಹೀರಾತು – ಚಕಾರವೆತ್ತದ ಪಾಲಿಕೆ: ಕನ್ನಡ ನಾಮಫ‌ಲಕಗಳಲ್ಲಿ ಶೇ.60 ಕನ್ನಡ ಬಳಸಬೇಕು ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ, ನಗರದ ಬಹುತೇಕ ಮೇಲ್ಸೇತುವೆ, ಬಸ್‌ ನಿಲ್ದಾಣ ಹಾಗೂ ಶೌಚಾಲಯಗಳ ಮುಂದೆ ಅನ್ಯಭಾಷೆಯ ಜಾಹೀರಾತುಗಳೇ ರಾರಾಜಿಸುತ್ತಿವೆ. ಇದರ ಬಗ್ಗೆ ಪಾಲಿಕೆ ಚಕಾರವೆತ್ತುತ್ತಿಲ್ಲ. ಈ ಮಧ್ಯೆ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಅಭಿವೃದ್ಧಿಗೆ ಹಾಗೂ ಕನ್ನಡ ನಾಮಫ‌ಲಕಗಳಿಗೆ ಆದ್ಯತೆ ನೀಡುವಂತೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದೆ.

Advertisement

ಅನಧಿಕೃತ ಬ್ಯಾನರ್‌, ಅಸಮರ್ಪಕ ಕಸ ವಿಂಗಡಣೆ 25 ಸಾವಿರ ರೂ. ದಂಡ: ಅನಧಿಕೃತ ಬ್ಯಾನರ್‌ ಅಳವಡಿಕೆ ಹಾಗೂ ಸಮರ್ಪಕ ವಾಗಿ ಕಸ ವಿಂಗಡಣೆ ಮಾಡದ ಆರೋಪದ ಮೇಲೆ ಎಚ್‌ಎಸ್‌ಆರ್‌ ಲೇಔಟ್‌ನ ಗೋಡ್ಸ್‌ ಜಿಮ್‌ ಇಂಡಿಯಾ ಸಂಸ್ಥೆ ಮೇಲೆ ಶನಿವಾರ ದಾಳಿ ನಡೆಸಿದ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು 25 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂದು ಬಿಬಿಎಂಪಿ (ಘನತ್ಯಾಜ್ಯ ನಿರ್ವಹಣೆ)ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಆಯುಕ್ತರ ಸೂಚನೆ
-ಕೋರ್ಟ್‌ ನಿರ್ದೇಶನದಂತೆ 15 ದಿನಗಳ ಒಳಗಾಗಿ ಎಲ್ಲ ಅನಧಿಕೃತ ಜಾಹೀರಾತು ಫ‌ಲಕಗಳನ್ನು ತೆರವು ಮಾಡುವುದು.

-ತೆರವುಗೊಳಿಸಿದ ಜಾಹೀರಾತು ಫ‌ಲಕಗ ಳನ್ನು ವಲಯ ಮಟ್ಟದ ನಿಯಮಾನುಸಾರ ಹರಾಜು ಹಾಕುವುದು ಹಾಗೂ ಮೊತ್ತವನ್ನು ಪಾಲಿಕೆಗೆ ಸೇರಿಸುವುದು.

-ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸದೆ ಇದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ನೇರ ಹೊಣೆ ಮಾಡ ಲಾಗುವುದು. ಮುಂದಿನ ಪರಿಣಾಮಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡಲಾಗು ವುದು ಎಂದು ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು ಫ‌ಲಕಗಳಿಗೆ ಸಂಬಂಧಿಸಿದ ವಿವರ
ವಲಯ ಹೋರ್ಡಿಂಗ್ಸ್‌
ಪೂರ್ವ 818
ಪಶ್ವಿ‌ಮ 218
ದಕ್ಷಿಣ 344
ಬೊಮ್ಮನಹಳ್ಳಿ 87
ಮಹದೇವಪುರ 160
ಯಲಹಂಕ 112
ದಾಸರಹಳ್ಳಿ 15
ರಾಜರಾಜೇಶ್ವರಿ ನಗರ 52
ಒಟ್ಟು 1806

Advertisement

Udayavani is now on Telegram. Click here to join our channel and stay updated with the latest news.

Next