ಬೆಂಗಳೂರು: ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ತಂಡ ಸಿಡಿ ಲೇಡಿ, ಪ್ರಕರಣದ ಕಿಂಗ್ ಪಿನ್ ಜತೆಗೆ ಆರೋಪಿ ಗಳಿಗೆ ಆರ್ಥಿ ಕ ನೆರವು ನೀಡಿದ ಗ್ರ್ಯಾನೈಟ್ ಉದ್ಯಮಿ ಶಿವಕುಮಾರ್ ಹಾಗೂ ಆವರ ಕಾರು ಚಾಲಕನಿಗೂ ಶೋಧ ನಡೆಸುತ್ತಿದೆ. ಮತ್ತೂಂದೆಡೆ ಸಿಡಿಯಲ್ಲಿದ್ದ ಯುವತಿಗೆ ಎಸ್ ಐಟಿ ಐದನೇ ಬಾರಿ ನೋಟಿಸ್ ಕಳುಹಿಸಿದೆ.
ಪ್ರಕರಣದ ಕೇಂದ್ರ ಬಿಂದು ಸಿಡಿ ಲೇಡಿಗಾಗಿ ಸತತ 20 ದಿನ ಗಳಿಂದ ಶೋಧ ನಡೆಸುತ್ತಿರುವ ಎಸ್ ಐಟಿಗೆ ಆಕೆಯ ಸುಳಿವು ಪತ್ತೆಯಾಗಿಲ್ಲ. ಈ ಮಧ್ಯೆ ಆಕೆಗೆ ವಿಚಾರಣೆ ಗೆ ಹಾಜರಾಗುವಂತೆ ನಾಲ್ಕು ಬಾರಿ ನೋಟಿಸ್ ಕೊಟ್ಟರೂ ಪ್ರತಿಕ್ರಿಯೆ ಇಲ್ಲ. ಹೀಗಾಗಿ ಇದೀಗ ಐದನೇ ಬಾರಿಗೆ ಇ-ಮೇಲ್, ವಾಟ್ಸ್ ಆ್ಯಪ್ ಹಾಗೂ ಮನೆಗೆ ನೋಟಿಸ್ ಕಳುಹಿಸಿದ್ದು, ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಬರಬೇ ಕು. ತಮಗೆ ಭದ್ರತೆ ಸಮಸ್ಯೆಯಾದರೆ, ಎಸ್ ಐಟಿ ಅಧಿಕಾರಿಗಳು ಭದ್ರತೆ ವ್ಯವಸ್ಥೆ ಮಾಡಲಿದ್ದಾರೆ ಎಂದು ನೋಟಿ ಸ್‌ನಲ್ಲಿ ಉಲ್ಲೇಖೀಸಲಾಗಿದೆ.
ಮತ್ತೂಂದೆಡೆ ಕಿಂಗ್ ಪಿನ್ ಗಳಾದ ಪತ್ರಕರ್ತ ನರೇಶ್‌ಗೌಡ, ಶ್ರವಣ್ ಪದೇಪದೆ ತಮ್ಮ ಲೋಕೇಷನ್ ಬದಲಿಸುತ್ತಿದ್ದು, ಇದೀಗ ಅವರು ಮಧ್ಯ ಪ್ರದೇಶದ ಆಸುಪಾಸಿನಲ್ಲಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದು, ಎರಡು ತಂಡ ಗಳು ಅವರ ಚಲನವಲನಗಳ ಮೇಲೆ ನಿಗಾವಹಿಸಿವೆ ಎಂದು ಮೂಲಗಳು ತಿಳಿಸಿವೆ.
ಉದ್ಯಮಿ ಶಿವ ಕುಮಾರ್‌ಗಾಗಿ ಶೋಧ: ಪ್ರಕರಣದ ಕಿಂಗ್ ಪಿನ್ ಗಳಿಗೆ ಆರ್ಥಿ ಕ ನೆರವು ನೀಡಿದ ಆರೋಪದ ಮೇಲೆ ಕನಕಪುರ ಮೂಲದ ಗ್ರ್ಯಾನೈಟ್ ಉದ್ಯಮಿ ಶಿವಕುಮಾರ್ ಎಂಬುವರ ಜೆ.ಪಿ. ನಗ ರದ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಪೆನ್ ಕ್ಯಾಮೆರಾ ಹಾಗೂ ಕೆಲವೊಂದು ದಾಖಲೆಗಳು ಸಿಕ್ಕಿವೆ. ಈ ಬೆನ್ನಲ್ಲೇ ಶಿವಕುಮಾರ್ ತಮ್ಮ ಕಾರು ಚಾಲಕನ ಜತೆ ಕೇರಳ ಕಡೆ ನಾಪತ್ತೆಯಾಗಿದ್ದರು. ತನಿಖೆ ವೇಳೆ ಶಿವಕುಮಾರ್ ಆರೋಪಿಗಳಿಗೆ ಆರ್ಥಿಕ ನೆರವು ನೀಡಿದ್ದು, ಅವರ ಕಾರು ಚಾಲಕನ ಮೂಲಕವು ಆರೋಪಿಗಳಿಗೆ ಹಣ ಕಳುಹಿಸಿದ್ದಾರೆ ಎನ್ನಲಾಗಿದೆ. ತಾಂತ್ರಿಕ ತನಿಖೆಯಲ್ಲಿ ಶಿವ ಕು ಮಾರ್ ಮತ್ತು
ಅವರ ಕಾರು ಚಾಲಕ ಪ್ರತ್ಯೇಕ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದು, ಪೊಲೀ ಸರ ದಿಕ್ಕು ತಪ್ಪಿ ಸು ತ್ತಿ ದ್ದಾರೆ. ಚಾಲಕ ಪ್ರಕರಣದ ಕಿಂಗ್ ಪಿನ್ ಗಳ ಜತೆಯೇ ಓಡಾಡುತ್ತಿದ್ದಾನೆ. ಹೊರ ರಾಜ್ಯ ಗಳ ಹೋಟೆ ಲ್, ರೆಸಾ ರ್ಟ್ ಗಲ್ಲಿ ಶೋಧ ನಡೆಸಲಾಗುತ್ತಿದೆ. ಈ ಸಂಬಂಧ ಕಿಂಗ್ ಪಿನ್ ಗಳು, ಸಿಡಿ ಲೇಡಿ, ಶಿವ ಕು ಮಾರ್, ಅವರ ಕಾರಚಾಲಕನ ಸಂಬಂಧಿ ಕರು, ಸ್ನೇಹಿತರು ಅವರ ಸಂಪರ್ಕದಲ್ಲಿರುವ ವ್ಯಕ್ತಿ ಗ ಳಿಗೆ ನೋಟಿಸ್ ಜಾರಿ ಮಾಡಲಾ ಗುತ್ತದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ