Advertisement

ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸೂಚನೆ

05:15 PM Mar 06, 2021 | Team Udayavani |

ಹುಳಿಯಾರು: ಹುಳಿಯಾರು ಎಪಿಎಂಸಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಪಟ್ಟಣದಲ್ಲಿ ಕೆಟ್ಟಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಅವರು ಪಪಂ ಮುಖ್ಯಾಧಿಕಾರಿ ಮಂಜುನಾಥ್‌ ಅವರಿಗೆ ಸೂಚನೆ ನೀಡಿದರು.

Advertisement

ಹುಳಿಯಾರು ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ಸಂದರ್ಭದಲ್ಲಿಹುಳಿಯಾರಿನ ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ವರ್ಷಗಳೇ ಕಳೆದಿದ್ದರೂ ದುರಸ್ತಿ ಮಾಡದಪರಿಣಾಮ ಹೆಚ್ಚು ಹಣ ಕೊಟ್ಟು ಖಾಸಗಿಯವರಿಂದನೀರು ಖರೀದಿಸಿ ಕುಡಿಯುವಂತ್ತಾಗಿದೆ ಎಂದು ಸಾರ್ವಜನಿಕರು ದೂರಿದರು.

ಜಿಲ್ಲಾಧಿಕಾರಿಗಳು ತಕ್ಷಣ ಪಪಂ ಮುಖ್ಯಾಧಿಕಾರಿಗಳನ್ನು ಕರೆಸಿ ಕುಡಿವ ನೀರಿನ ಘಟಕ ದುರಸ್ತಿಮಾಡಿಸದೆ ನಿರ್ಲಕ್ಷಿÂಸಿರುವ ಬಗ್ಗೆ ಪ್ರಶ್ನಿಸಿದರು.ಘಟಕಗಳೆಲ್ಲವೂ ಆರ್‌ಡಿಪಿಆರ್‌ ವ್ಯಾಪ್ತಿಯಲ್ಲಿದ್ದು,ನಮಗೆ ಇದೂವರೆವಿಗೂ ಹಸ್ತಾಂತರಿಸಿರುವುದಿಲ್ಲ. ಅವರು ಹಸ್ತಾಂತರಿಸಿದರೆ ದುರಸ್ತಿ ಮಾಡಿಸುವುದಾಗಿತಿಳಿಸಿದರು. ಅಲ್ಲದೆ 70 ಸಾವಿರಕ್ಕೂ ಹೆಚ್ಚು ಹಣ ದುರಸ್ತಿಗೆ ಬೇಕಾಗುತ್ತದೆ ನಮ್ಮಲ್ಲಿ ಕಂದಾಯ ವಸೂಲಿಯಾಗದಿರುವುದರಿಂದ ಅಷ್ಟು ಹಣ ವ್ಯಯಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಾಧಿಕಾರಿಗಳು ಸಮಜಾಯಿಸಿ ನೀಡಿದರು.

ಜಿಲ್ಲಾಧಿಕಾರಿಗಳು ಎಪಿಎಂಸಿಯಿಂದಲೇ ಜಿಪಂಸಿಇಒಗೆ ಕರೇ ಮಾಡಿ ಹುಳಿಯಾರು ಪಪಂ ಆಗಿಮೇಲ್ದರ್ಜೆಗೇರಿದ್ದರೂ ಶುದ್ಧ ನೀರಿನ ಘಟಕಗಳನ್ನುಅವರಿಗೆ ಹಸ್ತಾಂತರಿಸಿಲ್ಲ. ಪರಿಣಾಮ ಶುದ್ಧ ಕುಡಿವನೀರಿಗೆ ನಿವಾಸಿಗಳು ಪರದಾಡುತ್ತಿದ್ದು, ತಕ್ಷಣ ಇಒಅವರಿಗೆ ಹಸ್ತಾಂತರಿಸಲು ಸೂಚಿಸುವಂತೆತಿಳಿಸಿದರು. ಅಲ್ಲದೆ ಮುಖ್ಯಾಧಿಕಾರಿಗಳಿಗೆ ಆರ್‌ಡಿಪಿಆರ್‌ ಅವರು ಹಸ್ತಾಂತರಿಸುವರೆಗೂ ಕಾಯಬೇಡಿ ತಕರಾರು ಮಾಡಬೇಕಿರುವ ನಾನೇಹೇಳುತ್ತಿದ್ದೇನೆ ತಕ್ಷಣ ದುರಸ್ತಿ ಮಾಡಿ ಜನರಿಗೆ ಶುದ್ಧ ನೀರು ಕೊಡಿ ಎಂದರು.

ನಿಮಗೆ ಲಿಖೀತವಾಗಿ ಬೇಕಿದ್ದರೆ ಹೇಳಿ ಇಲ್ಲೇ ಆಡಳಿತಾಧಿಕಾರಿಗಳಾದ ತಹಶೀಲ್ದಾರ್‌ ಸಹ ಇದ್ದುಇಬ್ಬರೂ ಸೇರಿ ನಡಾವಳಿ ಮಾಡಿ ನನಗೊಂದು ಪತ್ರಕೊಡಿ ಈಗಲೇ ದುರಸ್ತಿ ಮಾಡಲು ಸಹಿ ಹಾಕಿಕೊಡುತ್ತೇನೆ. ದುರಸ್ತಿಗೆ ಹಣಕ್ಕೆ ಚಿಂತಿಸಬೇಡಿ ಎಸ್‌ಎಫ್‌ಸಿ ಹಣ ಬಳಕೆ ಮಾಡಿ, ನಾನು ಅಪ್ರೂವಲ್‌ ಕೊಡುತ್ತೇನೆ. ಕುಡಿಯುವ ನೀರು ಕೊಡಲು ಹೀಗೆ ನಿರ್ಲಕ್ಷಿಸಬಾರದು. ಹೇಗಾದರೂ ಸರಿ ಜನರಿಗೆ ನೀರು ಕೊಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕಿವಿ ಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next