Advertisement
ಹೀಗಾಗಿ ಈ ರಸ್ತೆ ಇಕ್ಕೆಲಗಳಲ್ಲಿ ಫುಟ್‌ಪಾಥ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ಶುಕ್ರವಾರದೊಳಗೆ ಪುಟ್‌ಪಾಥ್ ತೆರುವುಗೊಳಿಸಿ ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪಾರವನ್ನು ಸ್ಥಳಾಂತರಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿ ಕಾರಿ ಎಂ.ಬಿ. ಮಾಡಗಿ, ಸಿಪಿಐ ಆನಂದ , ಪಿಎಸೈ ಮಲ್ಲಪ್ಪ ಮಡ್ಡಿ ಸೂಚಿಸಿದರು. ಪುರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಸೋಮವಾರ ಎಲ್ಲ ರೀತಿಯ ಬೀದಿ ಬದಿ
Related Articles
Advertisement
ತಳ್ಳುಗಾಡಿಯವರು ಓಣಿ ಓಣಿ ತಿರುಗಾಡಿ ವ್ಯಾಪಾರ ನಡೆಸಬೇಕು. ಇಂಥವರು ಮುಖ್ಯ ರಸ್ತೆಯಲ್ಲಿ ತಮ್ಮ ಗಾಡಿ ನಿಲ್ಲಿಸಿ ವ್ಯಾಪಾರ ಮಾಡುವಂತಿಲ್ಲ. ಹಣ್ಣಿನ ವ್ಯಾಪಾರಸ್ಥರು ಹಳೇ ತಹಶೀಲ್ದಾರ್ ಕಚೇರಿ ಆವರಣಕ್ಕೆ ತಮ್ಮ ವ್ಯಾಪರ ಬದಲಿಸಬೇಕು. ಪಾನಿಪುರಿ, ಭಜಿ ವ್ಯಾಪಾರಸ್ಥರಿಗೆ ಬಸವೇಶ್ವರ ವೃತ್ತದ ಬಳಿ ಎಲ್ಲಿಯಾದರೂ ಒಂದು ಕಡೆ ಖುಲ್ಲಾ ಜಾಗೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಡಬ್ಟಾ ಅಂಗಡಿಯವರು ರಸ್ತೆ ಪಕ್ಕ ಅನಧಿಕೃತವಾಗಿ ಅಂಗಡಿ ಹಾಕಿಕೊಂಡಿದ್ದರೆ ತಕ್ಷಣ ತೆರುವುಗೊಳಿಸಬೇಕು. ಅವರು ಎಲ್ಲಿಯಾದರೂ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಳ್ಳಬೇಕು. ಯಾರೂ ಫುಟ್‌ಪಾಥ್ ಅತಿಕ್ರಮಿಸಿ ವ್ಯಾಪಾರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ವ್ಯಾಪಾರಸ್ಥರಿಗೆ ತಿಳಿಸಲಾಯಿತು.
ಅಧಿಕಾರಿಗಳು ಈ ನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಲವರು ಹಣ್ಣಿನ ವ್ಯಾಪಾರವನ್ನು ಬಸ್ ನಿಲ್ದಾಣದ ಹತ್ತಿರವೇ ಮಾಡಲು ಅವಕಾಶ ಕೊಡಬೇಕು ಎಂದರೆ ಮತ್ತೆ ಕೆಲವರು ತರಕಾರಿ ಮಾರುಕಟ್ಟೆಯಲ್ಲಿ ಕುಡಿವ ನೀರು, ಶೌಚಾಲಯ ಸೇರಿ ಯಾವುದೇ ಮೂಲ ಸೌಕರ್ಯ ಇಲ್ಲ ಮತ್ತು ಅದು ದೂರ ಆಗುವುದರಿಂದ ಜನರು ತರಕಾರಿ ಖರೀದಿಸಲು ಅಲ್ಲಿಗೆ ಬರುವುದಿಲ್ಲ ಎಂದು ವಾದ ಮಂಡಿಸಿದರು. ಪುರಸಭೆಯವರು ಎಲ್ಲ ಅನುಕೂಲ ಮಾಡಿಕೊಟ್ಟಲ್ಲಿ ತಮ್ಮ ವ್ಯಾಪಾರ ಸ್ಥಳಾಂತರಿಸುತ್ತೇವೆ ಎಂದು ನಿಲುವು ಸ್ಪಷ್ಟಪಡಿಸಿದರು.
ಒಟ್ಟಾರೆ ಬಹು ಹೊತ್ತಿನವರೆಗೂ ಚರ್ಚೆ ನಡೆದು ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದನ್ನು ಪ್ರಕಟಿಸಿ ಶುಕ್ರವಾರದೊಳಗೆ ಅತಿಕ್ರಮಣ ತೆರುವುಗೊಳಿಸಿ ವ್ಯಾಪಾರವನ್ನು ಸ್ಥಳಾಂತರಿಸದಿದ್ದರೆ ಬಲಪ್ರಯೋಗ ಅನಿವಾರ್ಯವಾಗುತ್ತದೆ ಎಂದು ತಿಳಿಹೇಳಿ ಸಹಕರಿಸುವಂತೆ ಮನವಿ ಮಾಡಿದರು. ಪುರಸಭೆ ಅಧಿ ಕಾರಿಗಳು, ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಿವಿಧ ತರಹದ ಬೀದಿ ಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.