ಆಳಂದ: ಇಲಾಖೆಗಳಿಗೆ ಸರ್ಕಾರ ವಹಿಸಿದ ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ರಸ್ತೆ, ಕಟ್ಟಡ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ವಹಿಸಿದ್ದ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಸಂಬಂಧಿ ತ ಅ ಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಆದ್ದರಿಂದ ಅಧಿ ಕಾರಿಗಳು ಕಚೇರಿಗೆ ಆಗಮಿಸಿ, ಕೇಂದ್ರಸ್ಥಾನದಲ್ಲೇ ಇದ್ದು ಇಲಾಖೆ ಯೋಜನೆಗಳನ್ನು ಜನತೆಗೆ ತಲುಪಿಸಬೇಕು ಎಂದು ತಾಕೀತು ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಜಿಲ್ಲಾ ಮಟ್ಟದ ಸಭೆಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ಕೇಳಿದ್ದಾರೆ.
ಅಧಿಕಾರಿಗಳು ಸಮನ್ವಯ ಸಾಧಿ ಸಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಕ್ಕೆ ತುರ್ತು ಹಾಗೂ ಮುಂದಿನ ದಿನಗಳಿಗೆ ಅಗತ್ಯ ಕಾಮಗಾರಿಗಳ ಕುರಿತು ವಿಸ್ತೃತ ವರದಿಯನ್ನು ಶೀಘ್ರವೇ ಸಿದ್ಧಪಡಿಸಿ ಕಳುಹಿಸಿಕೊಡಬೇಕು ಎಂದು ಹೇಳಿದರು. ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿಯಲು ಗಂಡೋರಿ ನಾಲಾ ನೀರು ತರುವುದು, ದೊಡ್ಡ ಗ್ರಾಮ ಮತ್ತು ಆಳಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ, ಅಮರ್ಜಾ ಸೇರಿದಂತೆ ಬೃಂದಾವನ ಮಾದರಿಯಲ್ಲಿ ಆರು ಕೆರೆಗಳನ್ನು ಅಭಿವೃದ್ಧಿ ಪಡಿಸುವ ಕ್ರಿಯಾ ಯೋಜನೆ ಪ್ರಸ್ತಾಪಿಸಬೇಕು ಎಂದರು. ವಿದ್ಯುತ್ ಟ್ರಾನ್ಸ್‌ಫಾರಂಗಳು ಸುಟ್ಟು ತಿಂಗಳಾದರೂ ದುರುಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ. ಇದರಿಂದ ಬೆಳೆ ಹಾನಿಯಾಗುತ್ತಿದೆ. ಹೀಗಾದರೆ ಹೇಗೆ ಎಂದು ಜೆಸ್ಕಾಂ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದ ಶಾಸಕರು, ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿಗೆ ಸೂಚಿಸಿದರು.
ನಂತರ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಇಲಾಖೆ ರಸ್ತೆಗೆ ಎಂಸ್ಯಾಂಡ್ ಬದಲು ಭೂಸಾ ಬಳಕೆ ಮಾಡಲಾಗುತ್ತಿದೆ ಎಂದು ಅ ಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಬಿತ್ತನೆ ಕ್ಷೇತ್ರ ಗುರಿ ಸಾಧನೆ, ಬೀಜಗಳ ವಿತರಣೆ, ಮಳೆ ಕುರಿತು ಮಾಹಿತಿ ನೀಡಿದರು. ಗ್ರಾಮೀಣ ನೀರು ಸರಬರಾಜು ಎಇಇ ಚಂದ್ರಮೌಳಿ ಕುಡಿಯುವ ನೀರು ಪೂರೈಕೆ ಕೈಗೊಂಡ ಕಾಮಗಾರಿ ಮತ್ತು ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ತಿಳಿಸಿದರು. ಕ್ಷೇತ್ರ ಶಿಕ್ಷಣಾ ಧಿಕಾರಿ ಭರತರಾಜ ಸಾವಳಗಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ, ವಿದ್ಯಾರ್ಥಿಗಳಿಗೆ ಆಹಾರ ಪೂರೈಸುವ ಕುರಿತು ಶಾಸಕರ ಗಮನಕ್ಕೆ ತಂದರು.
ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ನಿರ್ವಹಿಸಿದರು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಮುಖಂಡ ಮಲ್ಲಣ್ಣಾ ನಾಗೂರೆ ಇದ್ದರು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ಮಿನುಗಾರಿಕೆ ಇಲಾಖೆ ಅಧಿ ಕಾರಿ ಶಂಕರ ಗೊಂದಳಿ, ಅರಣ್ಯ ಇಲಾಖೆ ಅ ಧಿಕಾರಿ ಚಂದ್ರಶೇಖರ ಹೇಮಾ, ಪ್ರಾದೇಶಿಕ ಅ ಧಿಕಾರಿ ರಾಘವೇಂದ್ರ, ಪಿಡಬುಡಿ ಅಧಿ ಕಾರಿ ಕರಬಸಪ್ಪ ಪಿಸರ್ಗಿ, ಶರಣಯ್ಯ ಹಿರೇಮಠ, ಕೈಗಾರಿಕೆ ಜಾಫರ್ ಅನ್ಸಾರಿ, ರೇಷ್ಮೆ ನಿರೀಕ್ಷಣಾ ಧಿಕಾರಿ ಡಿ.ಬಿ. ಪಾಟೀಲ, ಸಿಡಿಪಿಒ ಶವಮೂರ್ತಿ ಕುಂಬಾರ, ನೀರಾವರಿ ಇಲಾಖೆ ಎಇಇ ಶಾಂತಪ್ಪ, ಅಕ್ಷರ ದಾಸೋಹ ಅ ಧಿಕಾರಿ ಡಾ| ರಾಜಕುಮಾರ ಪಾಟೀಲ ಹಾಗೂ ಆಹಾರ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಅ ಧಿಕಾರಿಗಳ ಪ್ರಗತಿ ವರದಿ ಮಂಡಿಸಿದರು.
ಕೋವಿಡ್ ನಿಯಂತ್ರಣ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನಾ, ಪ್ರಾದೇಶಿಕ ಅರಣ್ಯ ಇಲಾಖೆ ಸೇರಿದಂತೆ ಕೆಲವು ಪ್ರಮುಖ ಇಲಾಖೆ ಯೋಜನೆಗಳಿಗೆ ಅನುದಾನ ಬಾರದ್ದಕ್ಕೆ ಕಾರ್ಯಕ್ರಮ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ ಎಂದು ಅಧಿ ಕಾರಿಗಳು ಶಾಸಕರ ಗಮನಕ್ಕೆ ತಂದರು.