ಮಂಡ್ಯ: ಕರ್ತವ್ಯಲೋಪ ಹಾಗೂ ಸತತಗೈರು ಹಾಜರಿಯಿಂದ ಗ್ರಾಮಸ್ಥರ ಆಕ್ರೋಶಕ್ಕೆಗುರಿಯಾಗಿದ್ದ ಹೊಳಲು ಪ್ರಾಥಮಿಕಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ರವಿಕುಮಾರ್ ಮೇಲೆ ಕ್ರಿಮಿನಲ್ ಮೊಕದ್ದಮೆದಾಖಲಿಸಿ, ಕರ್ತವ್ಯದಿಂದಅಮಾನತುಗೊಳಿಸುವಂತೆ ಸರ್ಕಾರಕ್ಕೆ ವರದಿಸಲ್ಲಿಸಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡರಿಗೆ ಸೂಚಿಸಿದರು.
ಕೋವಿಡ್‌ನಿಂದ ಜನ ನಲುಗುತ್ತಿರುವವೇಳೆ ವಾರಕ್ಕೊಮ್ಮೆ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿಮುಂಚಿತವಾಗಿ ಸಹಿ ಹಾಕಿ ತೆರಳುತ್ತಿದ್ದವೈದ್ಯಾಧಿಕಾರಿ ರವಿಕುಮಾರ್ ವರ್ತನೆ ವಿರುದ್ಧಸೋಮವಾರ ಗ್ರಾಮಸ್ಥರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರಸ್ಥಳಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಹಾಗೂ ತಹಶೀಲ್ದಾರ್ ಚಂದ್ರಶೇಖರ್‌ಶಂಗಾಳಿ ಉಪಸ್ಥಿತಿಯಲ್ಲಿ ಗ್ರಾಮಸ್ಥರ ಆಹವಾಲು ಆಲಿಸಿದ ಶಾಸಕರು ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡಅವರನ್ನು ತರಾಟೆಗೆ ತೆಗೆದುಕೊಂಡರು.ಕೊರೊನಾ ನಿಯಂತ್ರಣಕ್ಕೆ ವೈದ್ಯ ಸಮೂಹಕಾರ್ಯನಿರ್ವಹಿಸುತ್ತಿರುವ ವೇಳೆ ಸ್ಥಳೀಯವೈದ್ಯರು ಸತತ ಗೈರಾಗುತ್ತಿರುವ ಹಿನ್ನೆಲೆಯಲ್ಲಿಮುತುವರ್ಜಿ ವಹಿಸಬೇಕಾದ ತಾಲೂಕುಆರೋಗ್ಯಾಧಿಕಾರಿಗಳು ನಿರ್ಲಕ್ಷ ತೋರಿದರೆಸಹಿಸುವುದಿಲ್ಲ. ಕೂಡಲೇ ಸಂಬಂಧಪಟ್ಟವೈದ್ಯರ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸುಮಾಡಬೇಕು ಎಂದರು.
ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡರಿಗೆ ಈ ಸಂಬಂಧತಾಲ್ಲೂಕು ಆರೋಗ್ಯಾಧಿಕಾರಿ ವರದಿಯಂತೆತಹಶೀಲ್ದಾರ್ ಮೂಲಕ ಜಿಲ್ಲಾ ಧಿಕಾರಿಗಳಿಗೆವರದಿ ಸಲ್ಲಿಸಿ ವಿಷಮ ಪರಿಸ್ಥಿತಿಯಲ್ಲಿಕರ್ತವ್ಯಲೋಪ ಹಾಗೂ ಗೈರು ಹಾಜರಾಗಿರುವ ವೈದ್ಯರ ಅಮಾನತು ಹಾಗೂ ಕ್ರಿಮಿನಲ್‌ಮೊಕದ್ದಮೆ ದಾಖಲಿಸುವಂತೆ ತಾಕೀತುಮಾಡಿ ದರು. ಜತೆಗೆ ಇಲ್ಲಿನ ಸೋಂಕಿತರಿಗೆಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ದುದ್ದ ವ್ಯಾಪ್ತಿಯ ಕೆರೆಗಳಿಗೆ ನೀರುತುಂಬಿಸುವ ಕಾಮಗಾರಿಯಲ್ಲಿನಿರತರಾಗಿರುವ 25 ಮಂದಿ ಕಾರ್ಮಿಕರ ಪೈಕಿನಾಲ್ಕೆçದು ಮಂದಿಗೆ ರೋಗ ಲಕ್ಷಣಗಳುಗೋಚರಿಸಿದ್ದು, ಎಲ್ಲ ಕಾರ್ಮಿಕರ ತಪಾಸಣೆಗೆಕೂಡಲೇ ಕಾರ್ಯೋನ್ಮುಖರಾಗಬೇಕುಎಂದು ತಾಲೂಕು ಆರೋಗ್ಯಾಧಿಕಾರಿಗೆಸೂಚಿಸಿದರು.ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿಪ್ರತಿನಿತ್ಯ 8ರಿಂದ 10 ಮಂದಿ ಕೋವಿಡ್‌ನಿಂದಮರಣ ಮೃತರಾಗುತ್ತಿದ್ದು, ಇನ್ನುಳಿದಸೋಂಕಿತರ ಆರೈಕೆ ವಿಚಾರವಾಗಿ ವಿಶೇಷನಿಗಾ ವಹಿಸಲಾಗಿದೆ. ಪಾಂಡವಪುರತಾಲೂಕಿನ ಮೂಡಲಕೊಪ್ಪಲು ಗ್ರಾಮದಕಿತ್ತೂರು ರಾಣಿ ಚೆನ್ನಮ್ಮ ಶಾಲಾವರಣದಲ್ಲಿ200 ಮಂದಿ ಸೋಂಕಿತರನ್ನು ಆರೈಕೆಮಾಡಲಾಗುತ್ತಿದ್ದು, ಅಗತ್ಯ ಸೌಲಭ್ಯಒದಗಿಸಲಾಗಿದೆ ಎಂದರು.