Advertisement

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹಕ್ಕೆ ಸೂಚನೆ

08:23 AM May 18, 2020 | Team Udayavani |

ಹಾವೇರಿ: ಜಿಲ್ಲೆಯಲ್ಲಿರುವ ಖಾಸಗಿ ನರ್ಸಿಂಗ್‌ ಹೋಂ, ಕ್ಲಿನಿಕ್‌ ಹಾಗೂ ಆಯುರ್ವೇದಿಕ್‌ ವೈದ್ಯರ ಬಳಿ ತಪಾಸಣೆಗೆ ಬಂದವರ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಜಿ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ  ಸೂಚಿಸಿದರು. ತಹಶೀಲ್ದಾರರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಈ ಸೂಚನೆ ನೀಡಿದರು.

Advertisement

ಖಾಸಗಿ ಆಸ್ಪತ್ರೆಯಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿ ಲಕ್ಷಣಗಳ ಕುರಿತಂತೆ ಚಿಕಿತ್ಸೆ ಪಡೆದಿದ್ದರೆ ಅದರ ಮಾಹಿತಿಯನ್ನು  ತಂತ್ರಾಂಶದಲ್ಲಿ ಅಪ್‌ ಲೋಡ್‌ ಮಾಡಬೇಕು. ಮೆಡಿಕಲ್‌ ಶಾಪ್‌ ಗಳಲ್ಲಿ ಈ ರೋಗ ಲಕ್ಷಣಗಳಿಗೆ ನಿರಂತರ ಮಾತ್ರೆಗಳನ್ನು ಖರೀದಿಸಿದವರ ಮಾಹಿತಿ ಪಡೆದು ನಿಗಾವಹಿಸಬೇಕು ಎಂದು ಸೂಚಿಸಿದರು. ಕಳೆದ ಏಪ್ರಿಲ್‌ನಿಂದ ಈವರೆಗೆ  ಜಿಲ್ಲೆಯಲ್ಲಿ ಮರಣ ಹೊಂದಿದವರ ಮಾಹಿತಿ ಹಾಗೂ ಯಾವ ಕಾರಣಕ್ಕೆ ಮರಣ ಹೊಂದಿದ್ದಾರೆ ಎಂಬ ಮಾಹಿತಿ ಕ್ರೋಡೀಕರಿಸಿ ನೀಡಬೇಕು.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಅನ್ಯ ಮಾರ್ಗದಿಂದ ಜಿಲ್ಲೆಗೆ ಬರುವವರ ಮೇಲೆ ತೀವ್ರ  ನಿಗಾವಹಿಸಿ ಇಂತಹವರ ಮಾಹಿತಿ ಪಡೆದು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್‌ಗೆ ಕ್ರಮವಹಿಸಬೇಕು ಎಂದು ಆದೇಶಿಸಿದ್ದಾರೆ. “ಸೇವಾ ಸಿಂಧು’ ನೋಂದಣಿ ಪಾಸ್‌ ನೊಂದಿಗೆ ಜಿಲ್ಲೆಗೆ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ  ಎಸ್‌ಒಪಿ ಮಾರ್ಗಸೂಚಿಯಂತೆ ಕ್ರಮವಹಿಸಬೇಕು. ಬೇರೆ ಮಾರ್ಗದಿಂದ ಜಿಲ್ಲೆಗೆ ಪ್ರವೇಶ ಮಾಡಿದವರ ಮಾಹಿತಿಯನ್ನು ಪಿಡಿಒಗಳ ಮೂಲಕ ಪಡೆಯಬೇಕು.

ಇದರಲ್ಲಿ ನಿರ್ಲಕ್ಷ ವಹಿಸಿ ಇವರಿಂದ ಕೋವಿಡ್‌ ಪ್ರಕರಣಗಳು  ತ್ತೆಯಾದಲ್ಲಿ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವವರಿಗೆ ಉತ್ತಮ ಊಟ, ಸ್ವತ್ಛತೆ ಕಾರ್ಯ, ಶುಚಿ ಸಂಭ್ರಮ ಕಿಟ್‌ ನೀಡಬೇಕು. ಮಾಸ್ಕ್, ಸ್ಯಾನಿಟೈಸರ್‌ ನೀಡಬೇಕು ಎಂದರು.  ಅಪರ ಜಿಲ್ಲಾಧಿಕಾರಿ  ಸ್‌. ಯೋಗೇಶ್ವರ ಮಾತನಾಡಿ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ನಲ್ಲಿ ಉಳಿದು ಕೊಂಡಿದ್ದಾರೆಯೇ ಎಂಬುದನ್ನು ತೀವ್ರ ನಿಗಾವಹಿಸಬೇಕು ಎಂದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ 4,508 ಜನರಲ್ಲಿ 4,140 ಜನರು ಹೋಂ ಕ್ವಾರಂಟೈನ್‌ ಹಾಗೂ 380 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಗೃಹ ಪ್ರತ್ಯೇಕತೆಯಲ್ಲಿರುವ 4,140 ಜನರ ಮೇಲೆ ನಿತ್ಯವೂ ನಿಗಾವಹಿಸಬೇಕು. ಮನೆ ಮನೆಗೆ ಭೇಟಿ ನೀಡಿ ಇವರ  ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬೇಕು. ಈ ಕಾರ್ಯಕ್ಕೆ ನಿಯೋಜಿತಗೊಂಡಿರುವ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಹಂಚಿಕೆ ಮಾಡಿಕೊಂಡು ನಿತ್ಯ ನಿಗಾವಹಿಸಬೇಕು.

Advertisement

ಇದೇ  ಮಾದರಿಯಲ್ಲಿ ನಗರ ಪ್ರದೇಶದಲ್ಲಿ ನಿಯೋಜಿತಗೊಂಡ ನಗರ ಸ್ಥಳೀಯ ಸಂಸ್ಥೆಗಳ ಬಿಲ್‌ ಕಲೆಕ್ಟರ್‌ಗಳು ಈ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು. ಎಸಿ ಡಾ| ದಿಲೀಷ್‌ ಶಶಿ, ಡಿಡಿಪಿಐ  ಅಂದಾನೆಪ್ಪ ವಡಗೇರಿ, ಲಲಿತಾ ಸಾತೇನಹಳ್ಳಿ, ಡಿಎಚ್‌ಒ ಡಾ| ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ನಾಗರಾಜ ನಾಯಕ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next